ಆರ್ ಆರ್ ಗೆ 33 ರನ್ ಗಳ ಗೆಲುವು, ಸಂಜು ಹೋರಾಟ ವ್ಯರ್ಥ

ಅಬುಧಾಬಿ, ಸೆ.25- ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ 33 ರನ್ ಗಳಿಂದ ಸೋಲು ಅನುಭವಿಸಿದೆ.


154 ರನ್ ಗಳ ಬೆನ್ನಹತ್ತಿದ ರಾಜಸ್ಥಾನ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು121 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನಾಯಕ ಸಂಜು‌ ಸ್ಯಾಮಸ್ಸನ್ ನಡೆಸಿದ ಏಕಾಂಗಿ ಹೋರಾಟ ವ್ಯರ್ಥವಾಯಿತು. 50 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಅಜೇಯ 70 ರನ್ ಗಳಿಸಿದರು. ಮಹಿಪಾಲ್ 19 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು.
ಅನ್ ರಿಚ್ ಎರಡು ವಿಕೆಟ್ ಪಡೆದರೆ, ಅವೇಶ್ ಖಾನ್, ಅಶ್ವಿನ್, ರಬಾಡ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 154 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು. ಪೃಥ್ಬಿ ಷಾ ಮತ್ತು ಶಿಖರ್ ಧವನ್ ಉತ್ತಮ ಮುನ್ನಡೆ ದೊರಕಿಸಿಕೊಡಲು ವಿಫಲರಾದರು. 21 ರನ್ ಗಳಿಸುವಷ್ಟರಲ್ಲೇ ಎರಡು ವಿಕೆಟ್ ಕಳೆದುಕೊಂಡಿತು.
ಶ್ರೇಯಸ್ ಅಯ್ಯರ್ 43, ಹೆಟ್ಮಯರ್ 28 ವೃಷಭ್ ಪಂತ್ 24 ರನ್ ಗಳಿಸಿ ತಂಡದ ಮೊತ್ತ150 ರನ್ ಗಡಿ ದಾಟಲು ನೆರವಾದರು. ಅಶ್ವಿನ್ 6 ಹಾಗೂ ಅಕ್ಷರ್ ಪಟೇಲ್ 12 ರನ್ ಗಳಿಸಿ‌ ಅಜೇಯ ರಾಗುಳಿದರು. ಮುಸ್ತಫಿಜರ್ ಹಾಗೂ ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಪಡೆದರು.