ಆರ್‍ವೈಎಂಇಸಿ ಕಾಲೇಜಿನಲ್ಲಿ ಎಬಿವಿಪಿಯಿಂದ ಹುತಾತ್ಮರ ದಿನ

ಬಳ್ಳಾರಿ ಮಾ 27 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ಶಾಖೆಯಿಂದ ಭಗತ್‍ಸಿಂಗ್ ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ ನಿನ್ನೆ ನಗರದ ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸ್ವಾತಂತ್ರ್ಯದ ಮುನ್ನುಡಿ ಬಲಿದಾನದ ಕಿಡಿ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಎ.ಬಿ.ವಿ.ಪಿಯ ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣರವರು ಕಾರ್ಯಕ್ರಮದಲ್ಲಿ ಮಾತನಾಡಿ, ಭಗತ್‍ಸಿಂಗ್ ರವರು 12ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಹೋರಾಡುತ್ತೇನೆ ಮತ್ತು ದೇಶಕ್ಕಾಗಿ ನನ್ನ ಜೀವವನ್ನು ಮುಡಿಪಾಗಿಡುತ್ತೇನೆ ಎಂದು ಆಣೆ ಮಾಡಿದವರು. ನಾನು ಬದುಕಿದರೇ ದೇಶಕ್ಕೋಸ್ಕರ ಬದುಕುತ್ತೇನೆ ಎಂದು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು. ಒಂದು ಗುಂಪು ಮಾಡಿ ಸ್ವಾತಂತ್ರ್ಯಗೋಸ್ಕರ ಹೋರಾಡಿದರು. ಆದರೆ ಬ್ರಿಟೀಷ್ ಸರ್ಕಾರ 23ನೇ ಮಾರ್ಚ್-1931ರಂದು ಭಗತ್‍ಸಿಂಗ್ ರವರನ್ನು ನೇಣುಗಂಬಕ್ಕೆ ಏರಿಸಿತೆಂದರು.
ಪ್ರಾಂತ ಸಹಕಾರ್ಯವಾಹ ಪ್ರಸನ್ನ, ಆರ್.ವೈ.ಎಂ.ಸಿ. ಕಾಲೇಜಿನ ಪ್ರಾಂಶುಪಾಲ ಹನುಮಂತರೆಡ್ಡಿ, ವಿ.ಎಸ್.ಕೆ.ಯು.ವಿ. ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ ಮರ್ಚೆಡ್, ಎಬಿವಿಪಿಯ ವಿಭಾಗ ವಿದ್ಯಾರ್ಥಿನಿ ಪ್ರಮುಖರಾದ ಸೃಷ್ಟಿ, ನೇಹಾ, ನಿಸರ್ಗಾ, ಪೂರ್ವಿಕಾ, ಸುಶ್ಮಿತಾ, ಅಪೂರ್ವ, ಮೇಘನಾ, ವಿನಯ್, ಪವನ್, ಯೋಗೇಶ್, ಸಚಿಚಿತಾ ಮುಂತಾದವರು ಉಪಸ್ಥಿತರಿದ್ದರು.