ಆರ್‍ಟಿಇ ಹಣ, ಅಧಿಕಾರ ದುರುಪುಯೋಗ, ಮಹಿಳಾ ಶಿಕ್ಷಕರಿಗೆ ಕಿರುಕುಳ ಬಿಇಓ ವೆಂಕಯ್ಯ ಇನಾಂದಾರ್ ಹುದ್ದೆಯಿಂದ ಬಿಡುಗಡೆಗೊಳಿಸಿ: ದಸಂ ಸಮನ್ವಯ ಸಮಿತಿ ಆಗ್ರಹ

ಜೇವರ್ಗಿ:ನ.2: ಆರ್‍ಟಿಇ ಹಣ ಮರುಪಾವತಿ, ಅಧಿಕಾರ ದುರುಪಯೋಗ ಮತ್ತು ಶಿಕ್ಷಕರಿಗೆ ಕಿರುಕುಳ ಕೊಡುತ್ತಿರುವ ಆರೋಪ ಎದುರಿಸುತ್ತಿರುವ ವೆಂಕಯ್ಯ ಇನಾಂದಾರವರನ್ನು ಕೂಡಲೇ ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಯಿಂದ ಬಿಡುಗಡೆಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಲಿತ ಹಿರಿಯ ಮುಖಂಡರಾದ ಚಂದ್ರಶೇಖರ ಹರನಾಳ ಅವರು ಆಗ್ರಹಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಳ್ಳಿ ಶಿಕ್ಷಕಿಗೆ ಅವಾಚ್ಯ ಶಬ್ದ ಪದ ಬಳಕೆ, ಜೇರಟಗಿ ಉರ್ದು ಶಿಕ್ಷಕನಿಗೆ ಲಂಚದ ಬೇಡಿಕೆ, ನರಿಬೋಳ ಶಿಕ್ಷಕಿಗೆ ಅಕ್ಷರ ಲೋಪ ದೋಷದ ಕುರಿತು ಶಿಸ್ತು ಕ್ರಮಕ್ಕೆ ಆದೇಶಿಸಿದ ಬಿಇಓ ತನ್ನ ಕಛೇರಿ ಸಿಬ್ಬಂದಿಯಿಂದಲೇ ಶಿಕ್ಷಕಿ ಕ್ಕಿಂತ ಅಕ್ಷರ ಲೋಪ ದೋಷಗಳು ಹೆಚ್ಚಾಗಿವೆ, ಕಳೆದ ಸೆಪ್ಟೆಂಬರ್ 04 ರಂದು ವೆಂಕಯ್ಯ ಇನಾಂದಾರ ಅವರ ಕುರಿತು ವಿಚಾರಣೆ ಮಾಡಿ, ವಿಚಾರಣಾ ವರದಿಯೊಂದಿಗೆ ಶಿಸ್ತು ಕ್ರಮ ಜರಗುಸುವಂತೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಾಗಿದೆ. ಅದಾಗ್ಯೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರು ಅಧಿಕಾರ ದುರುಪಯೋಗ ಮುಂದುವರೆಸಿದ್ದಾರೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು ಕಳವಳ ವ್ಯಕ್ತಪಡಿಸಿದರು.

ಸ್ಥಳೀಯ ಅಧಿಕಾರಿಗೆ ಅವರ ಸ್ವಂತ ತಾಲ್ಲೂಕು ಮತು ಜಿಲ್ಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯಮಗಳಲ್ಲಿ ಅವಕಾಶಗಳಿಲ್ಲ. ಇಲ್ಲಿ ವರ್ಗಾವಣೆ ನಿಯಂತ್ರಣ ಕಾಯ್ದೆ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ. ಒಟ್ಟು ಈಗಾಗಲೇ ವೆಂಕಯ್ಯ ಇನಾಂದಾರ ಅವರ ಮೇಲೆ ಆರು ಕ್ರಿಮೀನಲ್ ಪ್ರಕರಣಗಳು, ಲೋಕಾಯುಕ್ತ ಪ್ರಕರಣಗಳು ಹಾಗೂ ಇಲಾಖಾ ವಿಚಾರಣೆಗಳು ಬಾಕಿ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲು ನಿಯಮಗಳಲ್ಲಿ ಅವಕಾಶ ಇಲ್ಲ. ಶಹಾಪುರ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದಾಗ ಲಂಚ ಸ್ವಿಕರಿಸುವ ಸಮಯದಲ್ಲಿ ಸಿಕ್ಕಿ ಬಿದ್ದಿದ್ದು, ನ್ಯಾಯಂಗ್ ಬಂಧನದಲ್ಲಿದ್ದರು. ಆ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2015ರ ಜುಲೈ 18ರ ರಂದು ಜಾತಿ ನಿಂದನೆ ಪ್ರಕರಣ ದಾಖಲಾಗಿವೆ ಎಂದು ಅವರು ಬಿಡಿ ಬಿಡಿಯಾಗಿ ವಿವರಿಸಿದರು. ವೆಂಕಯ್ಯ ಇನಾಂದಾರ ಅವರು ಆಳಂದ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವಾಗ ಕೆರೆ ಅಂಬಲಗಾದ (ಬೆಳಮಗಿ ತಾಂಡದ ನಿಯೋಜಿತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ) ಸರಕಾರಿ ಪ್ರಾಥಮಿಕ ಹಿರಿಯ ಶಾಲೆಯ ಸಹ ಶಿಕ್ಷಕ ರೇಣುಕಾಚಾರ್ಯ ಅವರು ಸುಮಾರು ಒಂದು ವರ್ಷದಿಂದ ಅವರು ಗೈರು ಹಾಜರಾಗಿದ್ದರು. ಅದಾಗ್ಯೂ, ಅವರ ವೇತನ ಪ್ರತಿ ತಿಂಗಳು ಕೂಡ ಪಾವತಿಯಾಗಿದೆ. ಸದರಿ ಪ್ರಕರಣದ ಕುರಿತು ಅಪರ ಆಯುಕ್ತರ ಕಛೇರಿಯಲ್ಲಿ ವಿಚಾರಣೆ ಬಾಕಿ ಇದೆ ಎಂದು ಅವರು ಹೇಳಿದರು. ಇಂತಹ ಕಳಂಕಿತ ಅಧಿಕಾರಿಯು ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮುಂದುವರೆದಿರುವುದು ಕಾನೂನುನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅವರು, ಈ ಹಿಂದೆ ಚಿಂಚೋಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ದತ್ತಪ್ಪ ತಳವಾರ ಅವರು ನಿಯಮ ಬಾಹಿರ ಕೆಲಸಗಳು, ಅಧಿಕಾರ ದುರುಪಯೋಗ ಮತ್ತು ಆಕ್ರಮಗಳನ್ನು ಎಸಗಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕಾಯ್ದಿರಿಸಿ ಅವರ ಸರಕಾರಿ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರಕ್ಕೆ ಅಧ್ಯರ್ಪಿಸಿ ಆದೇಶಿಸಿದ್ದಾರೆ. ಅದೇ ಮಾದರಿಯಲ್ಲಿ ವೆಂಕಯ್ಯ ಇನಾಂದಾರ ಅವರ ವಿರುದ್ಧವು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಇನಾಂದಾರವರನ್ನು ಬಿಡುಗಡೆಗೊಳಿಸಿದಿದ್ದರೆ ಮುಂದಿನಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲೆ, ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸುದ್ಧಿ ಗೋಷ್ಠಿಯ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ಧಿ ಗೋಷ್ಠಿಯಲ್ಲಿ ಭೀಮರಾಯ ನಗನೂರ, ಮಹಾದೇವ ಕೊಳುಕುರ, ದವಲಪ್ಪ ಮದನ್, ಶ್ರೀಮಂತ ದನ್ನಕರ್, ರಾಜಶೇಖರ್ ಶಿಲ್ಪಿ, ಭೀಮರಾಯ ಬಳಬಟ್ಟಿ, ಭಾಗಣ್ಣ ಸಿದ್ನಾಳ, ರಾಜು ಹಾಲಗಡ್ಲ, ಮಲ್ಲಮ್ಮ ಕೋಬ್ಬಿನ್ ಇತರರು ಇದ್ದರು.