ಆರ್‌ಸಿಬಿ ರಾಜಸ್ಥಾನ ಹಣಾಹಣಿ


ಮುಂಬೈ, ಏ. ೨೨- ಐಪಿಎಲ್ ಕ್ರಿಕೆಟ್‌ನಲ್ಲಿ ಇಂದು ಬೆಂಗಳೂರು ರಾಯಲ್ ಚಾಲೆಂಜರ್‍ಸ್ ಮತ್ತು ರಾಜಸ್ಥಾನ ರಾಯಲ್ಸ್ ಸೆಣಸಲಿದೆ. ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಇಂದು ನಡೆಯಲಿರುವ ನಾಲ್ಕನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಆರ್‌ಸಿಬಿ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ದೇವದತ್ತ ಪಡಿಕಲ್, ಮಾಕ್ಸ್‌ವೆಲ್, ಡಿವಿಲಿಯರ್‍ಸ್, ಅವರಂತಹ ಬ್ಯಾಟಿಂಗ್ ಪಡೆಯನ್ನೇ ಹೊಂದಿದೆ.
ಕಳೆದ ಪಂದ್ಯದಲ್ಲಿ ಡಿವಿಲಿಂiiರ್‍ಸ್, ಮಾಕ್ಸ್‌ವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇಂದಿನ ಪಂದ್ಯದಲ್ಲೂ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶಸನ ನೀಡಿ, ಗೆಲುವ ಸಾಧಿಸುವ ಹುಮ್ಮಸ್ಸಿನಲ್ಲಿದೆ ಆರ್‌ಸಿಬಿ.
ಇತ್ತ ರಾಜಸ್ಥಾನ ರಾಯಲ್ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಇಂದಿನ ಪಂದ್ಯ ಸಂಜು ಸ್ಯಾಮ್‌ಸನ್‌ಗೆ ಮಹತ್ವದ ಪಂದ್ಯವಾಗಿದೆ. ಬಟ್ಲರ್, ಸ್ಯಾಮ್‌ಸನ್, ಶಿವಂದುಬೆ, ಮಿಲ್ಲರ್, ತವಾಟಿಯಾ ಅವರ ಬ್ಯಾಟಿಂಗ್ ಮೆಚ್ಚಿಕೊಂಡಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿಗೆ ತಿರುಗೇಟು ನೀಡುವ ವಿಶ್ವಾಸದಲ್ಲಿದೆ ರಾಜಸ್ಥಾನ ರಾಯಲ್ಸ್.
ವಾಖೆಂಡೆ ಕ್ರೀಡಾಂಗಣ ಮೊದಲು ಬ್ಯಾಟ್ ಮಾಡುವ ತಂಡ ೨೦೦ ರನ್ ಗಳಿಸಬೇಕಾಗಿದೆ. ಇಲ್ಲಿ ೬ ಪಂದ್ಯಗಳು ನಡೆದಿದ್ದು, ೪ ಪಂದ್ಯಗಳಲ್ಲಿ ಎರಡನೇ ಬಾರಿ ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.