ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ ಸೆಣಸು

ಅಹಮದಾಬಾದ್, ಏ. ೨೭- ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿಂದು ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ ಮಧ್ಯೆ ಪಂದ್ಯ ನಡೆಯಲಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದ ಆರ್ ಸಿಬಿ ಚೆನ್ನೈ ವಿರುದ್ಧ ಮುಗ್ಗರಿಸಿತ್ತು. ಆದರೆ ಇಂದಿನ ಪಂದ್ಯದಲ್ಲಿ ಮತ್ತೆ ಗೆಲುವಿನ ನಾಗಲೋಟ ಮುಂದುವರೆಸುವ ವಿಶ್ವಾಸದಲ್ಲಿದೆ.
ತಂಡದಲ್ಲಿ ಕೆಲವೊಂದು ಬದಲಾಣೆ ಮಾಡುವ ಸಾಧ್ಯತೆ ಇದೆ. ಎಂಟು ಪಂದ್ಯಗಳಲ್ಲಿ ಆಟಗಾರರ ಬದಲಾವಣೆ ಮಾಡಿರಲಿಲ್ಲ. ಆಲ್ ರೌಂಡರ್ ಡೇನಿಯಲ್ ಬದಲಿಗೆ ನ್ಯೂಜಿಲೆಂಡ್‌ನ ಸ್ಪೋಟಕ ಬ್ಯಾಟ್ಸ್ ಮನ್ ಫಿನ್ ಆಲೆನ್ ಕಣಕ್ಕಿಳಿಸಿ ಬ್ಯಾಟಿಂಗ್ ಪಡೆಯನ್ನು ಬಲಿಷ್ಠಗೊಳಿಸುವತ್ತ ಕೊಹ್ಲಿ ಚಿತ್ರ ಹರಿಸಿದೆ.
ವಾಷಿಂಗ್ಟನ್ ಸುಂದರ್ ಸತತ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಹೆಚ್ಚುವರಿ ಬ್ಯಾಟ್ಸ್ ಮನ್‌ಗೆ ಮೊರೆ ಹೋಗಲು ಅರ್‌ಸಿಬಿ ಮುಂದಾಗಿದೆ.
ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಡುಪ್ಲೆಸಿಸ್, ಮ್ಯಾಕ್ಸ್ ವೆಲ್ ತಂಡಕ್ಕೆ ಬ್ಯಾಟಿಂಗ್ ಆಸರೆಯಾಗಿದ್ದಾರೆ. ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಪಡಿಕ್ಕಲ್ ಮತ್ತು ಕೊಹ್ಲಿ ಉತ್ತಮ ಇನ್ನಿಂಗ್ಸ್ ಆರಂಭ ನೀಡಬೇಕಾಗಿದೆ. ಸಿಎಸ್‌ಕೆ ವಿರುದ್ಧದ ಹೀನಾ ಯ ಸೋಲಿನ ಕಹಿಯನ್ನು ಮರೆತು ಇಂದಿನ ಪಂದ್ಯದಲ್ಲಿ ಮತ್ತೆ ಗೆಲ್ಲುವ ವಿಶ್ವಾಸದಲ್ಲಿದೆ ಕೊಹ್ಲಿ ಪಡೆ.
ಇನ್ನು ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ ಕಳೆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಗೆದ್ದು ಬೀಗುತ್ತಿದೆ.
ಹೀಗಾಗಿ ಸತತ ನಾಲ್ಕನೆ ಪಂದ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಅಕ್ಷರ್ ಪಟೇಲ್ ಸೇರ್ಪಡೆ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಿದೆ. ಧವನ್, ಪೃಥ್ವಿ ಷಾ, ಪಂತ್, ಸ್ಮಿತ್ ತಂಡದ ಬ್ಯಾಟಿಂಗ್ ಆಸರೆಯಾಗಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣ ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಹೀಗಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಒಟ್ಟಿನಲ್ಲಿ ಎರಡೂ ತಂಡಗಳ ನಡುವೆ ಜಯಗಳಿಸಲು ತೀವ್ರ ಪೈಪೋಟಿ ಏರ್ಪಡಲಿದೆ.