ಆರ್‌ಸಿಬಿ ಕೆಕೆಆರ್ ಪಂದ್ಯ ಮುಂದೂಡಿಕೆ

ನವದೆಹಲಿ,ಮೇ.೩- ಕೆಕೆಆರ್ ತಂಡದಲ್ಲಿ ಕೋವಿಡ್ ಸಂಬಂಧಿತ ಕಳವಳದಿಂದಾಗಿ ಇಂದು ನಡೆಯಬೇಕಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಐಪಿಎಲ್ ಪಂದ್ಯವನ್ನು ಮುಂದೂಡಲಾಗಿದೆ.
ಕೆಕೆಆರ್ ಶಿಬಿರದ ಇಬ್ಬರು ಆಟಗಾರರು ಕೋವಿಡ್ -೧೯ ಸೊಂಕಿತರಾಗಿದ್ದು ಅವರನ್ನು ಚಿಕಿತ್ಸೆಗೆ ದಾಖಲಿಸಲಿಸಿರುವುದರಿಂದ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಐಪಿಎಲ್ ೨೦೨೧ ರಲ್ಲಿ ಪ್ರಬಲ ಆರಂಭವನ್ನು ಪಡೆದುಕೊಂಡಿದ್ದು ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ.
ಮತ್ತೊಂದೆಡೆ, ಕೆಕೆಆರ್ ೧೪ ನೇ ಆವೃತ್ತಿಯಲ್ಲಿ ಏಳು ಪಂದ್ಯಗಳಿಂದ ಎರಡು ಜಯಗಳಿಸಿ ಪಾಯಿಂಟ್ ಟೇಬಲ್‌ನಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ.