ಆರ್‌ಡಿಸಿಸಿ ಬ್ಯಾಂಕ್ : ಶ್ರೀಕಾಂತ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು.ನ.13- ಆರ್‌ಡಿಸಿಸಿ ಬ್ಯಾಂಕ್ ಸಿನಿಯರ್ ಮ್ಯಾನೇಜರ್ ಶ್ರೀಕಾಂತ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾ ನೌಕರರ ಸಂಘ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಇಂದು ಆರ್‌ಡಿಸಿಸಿ ಬ್ಯಾಂಕ್ ಕಛೇರಿಯಲ್ಲಿ ಮನವಿ ನೀಡಲಾಯಿತು. ನಿಜಲಿಂಗಪ್ಪ ಕಾಲೋನಿ ಆರ್‌ಡಿಸಿಸಿ ಮುಖ್ಯ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಶೋಕ ಬಿ. ಅವರ ಹಲ್ಲೆ ಘಟನೆಗೆ ಸಂಬಂಧಿಸಿ, ಶ್ರೀಕಾಂತ ಮತ್ತು ಅವರ ಮಗ ಶ್ರೀರಂಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಶ್ರೀಕಾಂತ ಅವರು ಅಮಾನತುಗೊಂಡಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾಗಿದ್ದ ಅಶೋಕ ಬಿ.ಅವರು ಬೆಂಬಲಿಸಿದ್ದರು ಎನ್ನುವ ಕಾರಣಕ್ಕೆ ಅಶೋಕ ಅವರ ಮೇಲೆ ಈ ಹಲ್ಲೆ ನಡೆದಿದೆ. ಈ ಹಿನ್ನೆಲೆಯಲ್ಲಿ ಅಮಾನುತಗೊಂಡ ಶ್ರೀಕಾಂತ ಅವರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ರಾಜಶೇಖರ ದಿನ್ನಿ, ಗುರುಲಿಂಗಪ್ಪ, ಮಹಾದೇವಪ್ಪ ಮಿರ್ಜಾಪೂರು, ಸದಾಶಿವಪ್ಪ, ಪಂಪಾಪತಿ, ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.