ಆರ್‌ಕೆಬಿ ಫೌಂಡೇಷನ್ : ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣೆ ಶಿಬಿರ

ರಾಯಚೂರು.ನ.೨೦-ಎಂ.ಕೆ.ಭಂಡಾರಿ ಆಸ್ಪತ್ರೆಯ ವತಿಯಿಂದ ಸಂಜಯ ಭಂಡಾರಿ ಟ್ರಸ್ಟಿ ಆರ್.ಕೆ.ಬಿ. ಫೌಂಡೇಷನ್ ರವರ ಸ್ಮರಣಾರ್ಥವಾಗಿ ರಾಯಚೂರಿನ ಲಲಿತ ಮನೆ ವೃದ್ಧಾಶ್ರಮಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೃದ್ಧಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಿಲ್ಲೇಬೃಹನ್ಮಠ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ದಿ. ಸಂಜಯ ಭಂಡಾರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಭಂಡಾರಿ ಕುಟುಂಬದವರು ಸುಮಾರು ವರ್ಷಗಳಿಂದ ವಿಕಲ ಚೇತನರಿಗೆ ಮತ್ತು ಸುಮಾರು ಬಡಾವಣೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುತ್ತಾ ಬಂದಿರುವುದು ನಾವು ಗಮನಿಸಿದ್ದೇವೆ. ಇವತ್ತಿನ ದಿನ ತಮ್ಮ ಕುಟುಂಬದ ಯುವರಾಜ ಸಂಜಯ ಭಂಡಾರಿ ಸ್ಮರಣಾರ್ಥವಾಗಿ ವೃದ್ಧಾಶ್ರಮಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ, ಇವರುಗಳು ಯಾವುದೇ ಜಾತಿ-ಧರ್ಮ ಬೇದವಿಲ್ಲದೇ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ. ಆ ಭಗವಂತನು ಅವರ ಧರ್ಮಪತ್ನಿ ಮತ್ತು ಮಕ್ಕಳು ಹಾಗೂ ಅಪಾರ ಬಂಧು ಬಳಗದವರಿಗೆ ಈ ದುಖಃ ಸಹಿಸುವ ಶಕ್ತಿ ಆ ಭಗವಂತ ಕರುಣಿಸಲು ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಅತಿಥಿಯಾಗಿ ಮಾತನಾಡಿದ ಕಾಂನ್ವೆಂಟ್ ಶಾಲೆಯ ಉನ್ನತ ಅಧಿಕಾರಿಗಳಾದ ಸಿಸ್ಟರ್ ಹೆಲೆನ್ ಮಾತನಾಡುತ್ತಾ ಭಂಡಾರಿ ಕುಟುಂಬದವರು ವೃದ್ಧಾಶ್ರಮಿಗಳಿಗೆ ಇಂತಹ ದುಖಃದ ಸಮಯದಲ್ಲಿಯೂ ಸಹ ಉಚಿತ ಆರೋಗ್ಯ ತಪಾಸಣೆ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ಎಂದರು.
ದಿ|| ಸಂಜಯ ಭಂಡಾರಿಯವರು ಬಹಳ ಉದಾರ ಜೀವಿಗಳಾಗಿದ್ದರು. ಯಾರಿಗೂ ಸಹ ಭೇದಭಾವವಿಲ್ಲದೇ ತಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಜೊತೆ ಅನುನ್ಯವಾಗಿದ್ದು, ಯಾವುತ್ತು ತನ್ನನ್ನು ತಾನು ದೊಡ್ಡವನಾಗಿ ತಿಳಿದುಕೊಳ್ಳಲಾರದೇ ಎಲ್ಲರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿರುತ್ತಾರೆಂದು ನಮಗೆ ತಿಳಿದಿರುತ್ತದೆ. ಆದ್ದರಿಂದ ಆ ಭಗವಂತನು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸಿದರು.
ಇನ್ನೊಬ್ಬ ಅತಿಥಿಯಾಗಿ ಮಾತನಾಡಿದ ಬಿ.ಬಸವರಾಜ ಅಧ್ಯಕ್ಷರು ಸೂರ್ಯೋದಯ ವಾಕಿಂಗ್ ಕ್ಲಬ್ ಸುಮಾರು ವರ್ಷಗಳಿಂದ ನಾವುಗಳು ಭಂಡಾರಿ ಆಸ್ಪತ್ರೆಯ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಾಡಿದ್ದೇವೆ ಅವರ ಮನೆಯ ಕುಡಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಸಹ ಅವರುಗಳು ವೃದ್ಧಾಶ್ರಮಕ್ಕೆ ಬಂದು ಇಲ್ಲಿರುವಂತಹ ವೃದ್ಧಾಶ್ರಮಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ. ಆ ಭಗವಂತ ಇವರಿಗೆ ಇನ್ನಷ್ಟು ಶಕ್ತಿಕೊಡಲೆಂದು ಪ್ರಾರ್ಥಿಸುತ್ತೇನೆ.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಅನೀಲ್, ವೃದ್ಧಾಶ್ರಮದ ಸಿಬ್ಬಂದಿ ಕೋರಿದರು. ಕಾರ್ಯಕ್ರಮದಲ್ಲಿ ಶ್ರೀಮಾನ ಸೌಭಾಗ್ಯರಾಜ್ ಭಂಡಾರಿ, ಸಂಜಯ ಭಂಡಾರಿಯವರ ಸಹೋದರರಾದ ಅಜಯ ಭಂಡಾರಿ, ಪವನ್ ಭಂಡಾರಿ, ಸಹೋದರಿ ಸಂಗೀತಾ ಸಲೋನಿ ಮತ್ತು ಅವರ ಪುತ್ರಿಯರಾದ ಶೃತಿ ಭಂಡಾರಿ, ದಿವ್ಯಾ ಭಂಡಾರಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಅನಿರುದ್ ಕುಲಕರ್ಣಿ, ಡಾ.ರಿಯಾಜ್, ಭೀಮಯ್ಯ, ಭಾಸ್ಕರ್ ಹಾಗೂ ವೃದ್ಧಾಶ್ರಮದ ಸಿಬ್ಬಂದಿಗಳಾದ ಮಾರೆಪ್ಪ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.