ಆರ್‌ಎಸ್‌ಎಸ್-ಬಿಜೆಪಿ ವಿಷಕಾರಿ: ಖರ್ಗೆ ವಾಗ್ದಾಳಿ

ಪುದುಚೆರಿ.ಏ.೨- ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತ ವಿಷಕಾರಿಯಾಗಿದ್ದು, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ ಪ್ರವೇಶಿಸಲು ಬಿಡಬಾರದು ಎಂದು ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಷಕ್ಕೆ ಸಮನಾಗಿದೆ. ಅದರ ರುಚಿ ನೋಡಿದರೆ ನೀವು ಸಾಯುತ್ತೀರಿ ಎಂದು ಎರಡೂ ರಾಜ್ಯಗಳ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಹೇಗೋ ಮಾಡಿ ಕರ್ನಾಟಕ ತಲುಪಿದೆ. ಆದರೆ, ಈ ವಿಷಕಾರಿ ಸಿದ್ಧಾಂತವನ್ನು ಪುದುಚೆರಿ ಮತ್ತು ತಮಿಳುನಾಡಿಗೆ ಪ್ರವೇಶಿಲು ಬಿಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಡಿಎಂಕೆ ಜತೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಪ್ರತಿಪಕ್ಷಗಳ ಒಕ್ಕೂಟದಲ್ಲಿ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಸ್ಪರ್ಧಿಸಿವೆ.
ಪುದುಚೆರಿ ವಿಧಾನಸಭೆಯ ೩೦ ಸ್ಥಾನಗಳಿಗೆ ಏ. ೬ ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ೫ ಸ್ಥಾನಗಳನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ೧೦,೦೨,೫೮೯ ಮತದಾರರು ಉಮೇದುವಾರರನ್ನು ಆಯ್ಕೆಮಾಡಲಿದ್ದಾರೆ.