ಆರ್‌ಎಸ್‌ಎಸ್‌ ನಾಯಕನ ಮನೆಯ ಮೇಲೆ ದಾಳಿ

ಕಾಸರಗೋಡು, ಎ.೪- ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ್ ಚೆಟ್ಟಿಯಾರ್ ಪೆರ್ಲ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಗುರುವಾರ ಮಧ್ಯರಾತ್ರಿ ಒಂದು ಗಂಟೆಯ ಬಳಿಕ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಗಳಿಸಿದ್ದಾರೆ.

ಮಂಜೇಶ್ವರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದ್ದು, ಚುನಾವಣೆಯ ಪ್ರಚಾರ ನಡೆಯುವ ಸಮಯದಲ್ಲಿ ಇಂತಹ ಸಮಾಜದ ಶಾಂತಿ ಕದಡುವ ಕ್ರಮ ಖಂಡನೀಯ ಎಂದಿದೆ. ಆರ್ ಎಸ್ ಎಸ್ ಮುಖಂಡರ ಮನೆಯ ಮೇಲೆ ದಾಳಿಯನ್ನು ಸಂಘ ಪರಿವಾರ ತೀಕ್ಷ್ಣವಾಗಿ ಖಂಡಿಸುತ್ತದೆ ಇದು ವಿರೋದಿ ಪಕ್ಷಗಳ ಕೃತ್ಯ ಎಂದು ಆರೋಪಿಸಿದೆ. ಅವರ ಮನೆಯ ಎದುರಿನಲ್ಲಿ ನಿಲ್ಲಿಸಿದ್ದ ಬುಲ್ಲೆಟ್ ಬೈಕಿಗೆ ಬೆಂಕಿ ಹಚ್ಚಲು ಪ್ರಯತ್ನಿಸಲಾಗಿದೆ ಅವರ ಪುತ್ರ ಕೃಷ್ಣರಾಜ ಬಿರ್ಲಾ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.