ಆರ್‌ಆರ್ ವಿರುದ್ಧ ಆರ್ ಸಿಬಿಗೆ ಭರ್ಜರಿ‌ ಗೆಲುವು

ದುಬೈ,ಅ 17- ಎಬಿ ಡಿ ವಿಲಿಯರ್ಸ್ ಅವರ ಬಿರುಸಿನ ಬ್ಯಾಟಿಂಗ್ ನೆರವನಿಂದ ಆರ್ ಸಿಬಿ, ಆರ್ ಆರ್ ತಂಡದ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಂಜಾಬ್ ಇಲೆವೆನ್ ತಂಡದ ವಿರುದ್ಧ ಮಾಡಿದ ಎಡವಟ್ಟಿನಿಂದ ಸೋಲು ಅನುಭವಿಸಿದ್ದ ಆರ್ ಸಿಬಿ‌ ಇಂದು ಗೆಲುವಿನ ನಗೆ ಬೀರಿದೆ.

ಎಬಿ ಡಿ ವಿಲಿಯರ್ಸ್ (ಅಜೇಯ 55 ರನ್ , 22 ಎಸೆತ, 1 ಫೋರ್, 6 ಸಿಕ್ಸರ್) ಮತ್ತು ಗುರ್ ಕೀರತ್ ಸಿಂಗ್ (ಅಜೇಯ 19 ರನ್ 17 ಎಸೆತ) ಅಮೋಘ ಜತೆಯಾಟದ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 13ನೇ ಆವೃತ್ತಿಯ 33ನೇ ಪಂದ್ಯದಲ್ಲಿ 7 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ ಮಣಿಸಿ, ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಆರನೇ ಗೆಲುವು ದಾಖಲಿಸಿದ ಕೊಹ್ಲಿ ಬಳಗ 12 ಅಂಕ ಕಲೆಹಾಕಿತು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತನ್ನ ಪಾಲಿನ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 19.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು.
ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿದ್ದ ಬೆಂಗಳೂರು ತಂಡಕ್ಕೆ ಆಸರೆಯಾದ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ ಒಳಗೊಂಡ ಅಜೇಯ 55 ರನ್ ಗಳಿಸಿ ತಂಡಕ್ಕೆ ರೋಚಕ ಜಯ ತಂದಿಟ್ಟರು. ಇದಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ 43 ಮತ್ತು ದೇವದತ್ ಪಡಿಕ್ಕಲ್ 35 ರನ್ ಗಳಿಸಿ ತಂಡಕ್ಕೆ ಅಡಿಪಾಯ ಹಾಕಿದರು.


ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಮೊದಲ ವಿಕೆಟ್ ಗೆ 51 ರನ್ ಕಲೆಹಾಕಿ ತಂಡಕ್ಕೆ ತಮ್ಮ ಕಾಣಿಕೆ ಅರ್ಪಿಸಿದರು. 19 ಎಸೆತಗಳಲ್ಲಿ 15 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದ ಸ್ಟೋಕ್ಸ್ ಕ್ರಿಸ್ ಮೋರಿಸ್ ಗೆ ವಿಕೆಟ್ ಒಪ್ಪಿಸಿದರು. ನಂತರ 22 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ ಒಳಗೊಂಡ 41 ರನ್ ಗಳಿಸಿ ಸಂಜು ಸ್ಯಾಮ್ಸನ್ ಜತೆ ಇನಿಂಗ್ಸ್ ಕಟ್ಟುವ ಯತ್ನದಲ್ಲಿದ್ದ ಉತ್ತಪ್ಪಗೆ ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಿಂಹಸ್ವಪ್ನವಾದರು. 8ನೇ ಓವರ್ ನ 4 ಮತ್ತು ಐದನೇ ಎಸೆತಗಳಲ್ಲಿ ಉತ್ತಪ್ಪ ಮತ್ತು ಸ್ಯಾಮ್ಸನ್ ವಿಕೆಟ್ ಉರುಳಿಸಿದ ಚಹಲ್, ಆರ್ ಸಿಬಿಗೆ ಮೇಲುಗೈ ತಂದುಕೊಡುವ ಜತೆಗೆ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.ಸ್ಮಿತ್-ಬಟ್ಲರ್ ಆಸರೆನಾಲ್ಕನೇ ವಿಕೆಟ್ ಗೆ ಜತೆಯಾದ ನಾಯಕ ಸ್ಮಿತ್ ಮತ್ತು ಬಟ್ಲರ್ ಬೆಂಗಳೂರು ತಂಡದ ಬೌಲರ್ ಗಳನ್ನು ಸಮರ್ಥವಾಗಿ ನಿಭಾಯಿಸಿ ತಂಡಕ್ಕೆ ಚುರುಕಿನ ರನ್ ತಂದುಕೊಟ್ಟರು. ಆದರೆ 25 ಎಸೆತಗಳಲ್ಲಿ 24 ರನ್ ಕಲೆಹಾಕಿದ್ದ ಬಟ್ಲರ್ 16ನೇ ಓವರ್ ನಲ್ಲಿ ಕ್ರಿಸ್ ಮೋರಿಸ್ ವಿಕೆಟ್ ಒಪ್ಪಿಸಿದರು. ಹೀಗಾಗಿ 58 ರನ್ ಗಳ ನಾಲ್ಕನೇ ವಿಕೆಟ್ ಜತೆಯಾಟ ಮುರಿದು ಬಿದ್ದಿತು.

ಒಂದೆಡೇ ವಿಕೆಟ್ ಉರುಳುತ್ತಿದ್ದರೂ ತಾಳ್ಮೆ ಕಳೆದುಕೊಳ್ಳದ ಸ್ಮಿತ್ 36 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಸಹಿತ 57 ರನ್ ಗಳಿಸಿ ಅರ್ಧಶತಕ ಪೂರೈಸುವುದರ ಜತೆಗೆ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಇವರ ಜತೆಗೆ ರಾಹುಲ್ ತೆವಾಟಿಯಾ ಸಹ (ಅಜೇಯ 19) ತಮ್ಮ ಕಾಣಿಕೆ ನೀಡಿದರು. ಬೆಂಗಳೂರು ಪರ ಕ್ರಿಸ್ ಮೋರಿಸ್ 4 ಹಾಗೂ ಯಜ್ವೇಂದ್ರ ಚಹಲ್ ಎರಡು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ್ ರಾಯಲ್ಸ್: 20 ಓವರ್ ಗಳಲ್ಲಿ 6 ವಿಕೆಟ್ ಗೆ177 (ಉತ್ತಪ್ಪ 41, ಸ್ಮಿತ್ 57, ಬಟ್ಲರ್ 24; ಕ್ರಿಸ್ ಮೋರಿಸ್ 26ಕ್ಕೆ 4, ಚಹಲ್ 34ಕ್ಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ ಗಳಲ್ಲಿ 000 ವಿಕೆಟ್ ಗೆ– (ವಿರಾಟ್ ಕೊಹ್ಲಿ 43, ಪಡಿಕ್ಕಲ್ 35, ಎಬಿ ಡಿ ವಿಲಿಯರ್ಸ್ ಅಜೇಯ 55; ತೆವಾಟಿಯಾ 30ಕ್ಕೆ 1, ತ್ಯಾಗಿ 32ಕ್ಕೆ 1).