
ನವದೆಹಲಿ,ಮಾ.೧೨- ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮೊದಲ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೨೩ರ ಋತುವಿನಲ್ಲಿ ಕೆಟ್ಟ ಆರಂಭವನ್ನು ಕಂಡಿರುವ ಆರ್‌ಸಿಬಿ ತಂಡ ಇಲ್ಲಿಯವರೆಗೆ ಆಡಿದ ಎಲ್ಲಾ ಪಂದ್ಯವನ್ನು ಸೋತಿದೆ.
ಸ್ಮೃತಿ ಮಂಧಾನ ನೇತೃತ್ವದ ತಂಡವು ತಮ್ಮ ನಿರೀಕ್ಷಿತ ಮಾನದಂಡಗಳ ಪ್ರಕಾರ ಪ್ರದರ್ಶನ ನೀಡಲು ಸಂಪೂರ್ಣ ಎಡವಿದೆ. ಜೊತೆಗೆ ಪಾಯಿಂಟ್ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನು ಈ ಪಂದ್ಯಾವಳಿಯಲ್ಲಿ ಮಂಧಾನ ಅವರ ತಂತ್ರಗಳು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಹೀಗಾಗಿ ಆರ್ ಸಿ ಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಮೊದಲಿಗೆ, ಆರ್‌ಸಿಬಿ ತನ್ನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಅನುಭವಿಸಿತು. ನಂತರ ಹರ್ಮನ್ಪ್ರೀತ್ ಕೌರ್ ಅವರ ಮುಂಬೈ ಇಂಡಿಯನ್ಸ್ ವಿರುದ್ಧವೂ ಹೀನಾಯ ಸೋಲು ಕಾಣುವಂತಾಯಿತು. ಗುಜರಾತ್ ಜೈಂಟ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಸೋತ ನಂತರ ಯುಪಿ ವಾರಿಯರ್ಸ್ ವಿರುದ್ಧ ಮತ್ತೊಂದು ಅವಮಾನಕರ ಸೋಲನ್ನು ಅನುಭವಿಸಿದೆ ಆರ್‌ಸಿಬಿ ತಂಡ. ಸರಣಿ ಸೋಲುಗಳಿಂದ ಕಂಗೆಟ್ಟ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇನ್ನು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಮಂಧಾನ, “ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದೇವೆ. ನಾವು ಉತ್ತಮವಾಗಿ ಪ್ರಾರಂಭಿಸಿದರೂ ಸಹ ವಿಕೆಟ್ಗಳ ಬ್ಯಾಕ್ ಟು ಬ್ಯಾಕ್ ಕಳೆದುಕೊಳ್ಳುವಿಕೆ ಸಮಸ್ಯೆಯಾಗಿದೆ. ನಾನು ಆಪಾದನೆಯನ್ನೂ ಸ್ವೀಕರಿಸುತ್ತೇವೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿ, ಬೌಲರ್‌ಗಳನ್ನು ರಕ್ಷಿಸಲು ನಾವು ಬೋರ್ಡ್‌ನಲ್ಲಿ ರನ್‌ಗಳನ್ನು ಕಲೆಹಾಕಬೇಕಾಗಿದೆ” ಎಂದು ಹೇಳಿದ್ದಾರೆ.
“ನಾವು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೆ ನಾನು ಬಹುತೇಕ ಎಲ್ಲ ಆಟಗಾರರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಅವರನ್ನು ಹುರಿದುಂಬಿಸುತ್ತೇನೆ. ಕಳೆದ ವಾರ ಕಠಿಣವಾಗಿತ್ತು. ನಾವು ಈ ಮೊದಲು ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ನನ್ನ ಸುತ್ತಲೂ ನನ್ನ ಕುಟುಂಬ ಯಾವಾಗಲೂ ಇರುತ್ತದೆ. ಆದರೆ ನಮ್ಮ ತಪ್ಪಿಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು ಎಂಬ ಭಾವನೆಯನ್ನು ನಾನು ಹೊಂದಿದ್ದೇನೆ” ಎಂದಿದ್ದಾರೆ.