ಆರ್ಸಿಬಿಗೆ ಹ್ಯಾಟ್ರಿಕ್ ಜಯ: 7ನೇ ಸ್ಥಾನಕ್ಕೇರಿದ ಬೆಂಗಳೂರು

ಬೆಂಗಳೂರು: ನಾಯಕ ಫಾಫ್ ಡುಪ್ಲೆಸಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್ ಜಯ ಸಾಧಿಸಿದೆ. ಬೆಂಗಳೂರು ತಂಡ ಹ್ಯಾಟ್ರಿಕ್ ಜಯದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 19.3 ಓವರ್ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಆರ್ಸಿಬಿ 13.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತು.
148 ರನ್ ಗಳ ಗುರಿ ಬೆನ್ನತ್ತಿದ ಆರ್ಸಿಬಿಗೆ ವಿರಾಟ್ ಕೊಹ್ಲಿ (42ರನ್) ಮತ್ತು ನಾಯಕ ಫಾಫ್ ಡುಪ್ಲೆಸಿಸ್ (64ರನ್) ಮೊದಲ ವಿಕೆಟ್ಗೆ 92 ರನ್ ಸೇರಿಸಿದರು. ಫಾಫ್ ಡುಪ್ಲೆಸಿಸ್ 23 ಎಸೆತಗಳಲ್ಲಿ 64 ರನ್ ಹೊಡೆದರು. ನಂತರ ಬಂದ ವಿಲ್ ಜ್ಯಾಕ್ಸ್ (1), ರಜತ್ ಪಾಟಿದಾರ್ (2)ಮ್ಯಾಕ್ಸ್ ವೆಲ್ 4, ಗ್ರೀನ್ 1, ವಿರಾಟ್ ಕೊಹ್ಲಿ 42, ದಿನೇಶ್ ಕಾರ್ತಿಕ್ ಅಜೇಯ 21, ಸ್ವಪ್ನಿಲ್ ಅಜೇಯ 15 ರನ್ ಗಳಿಸಿದರು,
ಟೈಟಾನ್ಸ್ ಪರ ಜೋಶ್ ಲಿಟ್ಲ್45ಕ್ಕೆ 4, ನೂರ್ರ್ ಅಹ್ಮದ್ 23ಕ್ಕೆ 2 ವಿಕೆಟ್ ಪಡೆದರು.
ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಆತಿಥೇಯ ಆರ್ಸಿಬಿ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 147ರನ್ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಂಘಟಿತ ದಾಳಿ ನಡೆಸಿದ ಆರ್ಸಿಬಿ ಟೈಟಾನ್ಸ್ ತಂಡದ ಮೇಲೆ ಸವಾರಿ ಮಾಡಿತು. ಟೈಟಾನ್ಸ್ ಪರ ವೃದ್ದಿಮಾನ್ ಸಾಹಾ 1, ಶು`Àಮನ್ ಗಿಲ್ 2, ಸಾಯಿ ಸುದರ್ಶನ್ 6, ಶಾರುಖ್ ಖಾನ್ (37ರನ್) ಮತ್ತು ಡೇವಿಡ್ ಮಿಲ್ಲರ್ (30 ರನ್) 61 ರನ್ ಜತೆಯಾಟ ನೀಡಿದರು. ನಂತರ ಬಂದ ರಾಹುಲ್ ತೆವಾಟಿಯಾ 35, ರಶೀದ್ ಖಾನ್ 18, ವಿಜಯ್ ಶಂಕರ್ 10 ರನ್ ಗಳಿಸಿದರು.
ಆರ್ಸಿಬಿ ಪರ ಮೊಹ್ಮದ್ ಸಿರಾಜ್ 29ಕ್ಕೆ 2, ಯಶ್ ದಯಾಳ್ 21ಕ್ಕೆ 2, ವಿಜಯ್ ಕುಮಾರ್ 23ಕ್ಕೆ 2, ಗ್ರೀನ್ 28ಕ್ಕೆ 1, ಕರಣ್ ಶರ್ಮಾ 42ಕ್ಕೆ 1 ವಿಕೆಟ್ ಪಡೆದರು.