ಆರ್ಯ ಸಮಾಜದಿಂದ ಕೊರೊನಾ ನಿವಾರಣೆಗಾಗಿ ಹೋಮ

ಹುಮನಾಬಾದ:ಮೇ.27: ಕೊರೊನಾ ಸೋಂಕು ನಿವಾರಣೆಗೆ ಪಟ್ಟಣದ ಆರ್ಯ ಸಮಾಜದ ವತಿಯಿಂದ ಲಕ್ಷ್ಮಿ ವೆಂಕಟೇಶ್ವರ ದೇವಾಸ್ಥಾನದಲ್ಲಿ ಬುಧವಾರ ಹೋಮ ನಡೆಸಲಾಯಿತು. ನಂತರ ನಗರದಲ್ಲಿ ಸಂಚಾರ ಮಾಡಲಾಯಿತು.

ಪಟ್ಟಣದ ಜೈನ್‍ಗಲ್ಲಿ, ಪುರಾಣಿ ಗಲ್ಲಿ, ಬಪ್ಪಣ್ಣಿ ಗಲ್ಲಿ, ತರನಳ್ಳಿ ಗಲ್ಲಿ, ಪುಟಾಣಿ ಗಲ್ಲಿ, ಬಾಲಾಜಿ ಮಂದಿರ, ಬಸವೇಶ್ವರ ವೃತ್ತ, ಶೀಲವಂತ ಗಲ್ಲಿ, ಖೇಳಗೆರ್ ಗಲ್ಲಿ ಸೇರಿದಂತೆ ವಿವಿಧ ಓಣಿಗಳಲ್ಲಿ ಸಂಚರಿಸಿ ಹವನದ ಹೊಗೆ ಹರಿಬಿಡಲಾಯಿತು.

ಈ ಸಂದರ್ಭದಲ್ಲಿ ಗೋವಿಂದ್ ಸಿಂಗ್ ತಿವಾರಿ, ನಿವೃತ್ತ ಶಿಕ್ಷಕ ಬಸವರಾಜ ಕೊಂಡಗುಳಿ, ದಿಗಂಬರ ಖಮೀತ್ಕರ್ ಇದ್ದರು.