ಆರ್ಯ ವೈಶ್ಯ ಸಮಾಜ ಸಂಘಟನೆಗೆ ಒತ್ತು ನೀಡಿ: ಗಾದೇವರ್

ಹುಮನಾಬಾದ್:ಜೂ.4: ಆರ್ಯ ವೈಶ್ಯ ಸಮಾಜ ಸಂಘಟನೆಗೆ ಒತ್ತು ನೀಡಬೆಕೆಂದು ಮಹಾರಾಷ್ಟ್ರದ ಆರ್ಯ ವೈಶ್ಯ ಸಮಾಜ ರಾಜ್ಯಾಧ್ಯಕ್ಷರು ಹಾಗೂ ಕಾಶಿ ಅನ್ನಪೂರ್ಣ ವಾಸವಿ ವೃದ್ಧಾಶ್ರಮದ ಮತ್ತು ಅನಾಥಾಶ್ರಮದ ಉಪಾಧ್ಯಕ್ಷರು, ಆರ್ಯ ವೈಶ್ಯ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರು ಆದ ನಂದಕುಮಾರ ಗಾದೇವರ ಹೇಳಿದರು.

ಶುಕ್ರವಾರ ಪಟ್ಟಣದ ನಗರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ದೇವರ ದರ್ಶನ ಪಡೆದ ಸಂದರ್ಬದಲ್ಲಿ ಬೀದರ್ ಜಿಲ್ಲಾ ಆರ್ಯ ವೈಶ್ಯ ಸಮಾಜದ ಜಿಲ್ಲಾಧ್ಯಕ್ಷ ದತ್ತಕುಮಾರ ಚಿದ್ರಿ ರವರು ಸಮಾಜದ ವತಿಯಿಂದ ಸನ್ಮಾನ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿz ಅವರು, ಸಮಾಜದ ಜನರನ್ನು ಆರ್ಥಿಕ ಶೈಕ್ಷಣಿಕ, ರಾಜಕೀಯವಾಗಿ ಬೆಳೆಸಬೇಕು ಎಂದು ಕರೆ ನೀಡಿದರು. ದೇವಸ್ಥಾನವನ್ನು ಮಾದರಿ ದೇವಸ್ಥಾನವಾಗಿ ಮಾಡಿ ನನ್ನ ಸಹಕಾರ ನಿಮಗೆ ಇದೆ ಎಂದು ತಿಳಿಸಿದರು. ಈ ಸಂದರ್ಬದಲ್ಲಿ ಜಿಲ್ಲಾ ಆರ್ಯ ವೈಶ್ಯ ಅಧ್ಯಕ್ಷ ದತ್ತಕುಮಾರ ಚಿದ್ರಿ, ಆರ್ಯ ಸಮಾಜ ರಾಜ್ಯ ಕಾರ್ಯಕಾರಣಿ ಸದಸ್ಯ ನಾರಾಯಣ ಚಿದ್ರಿ, ದೇವಸ್ಥಾನ ಕಜಾಂಚಿ ವಿರೇಶ ಜಾಜಿ, ಲಕ್ಷ್ಮಣ ಹಣಕುಣಿಕ, ದತ್ತು ಉಪಲ್ಲಿ, ನಂದಕುಮಾರ ಚಿದ್ರಿ,ವಸಂತಕುಮಾರ ಚಿದ್ರಿ, ನಾಗರಾಜ ರಘೋಜಿ, ಸಂಜುಪನ್ಸಲ್‍ವಾರ, ವೆಂಕಟೇಶ ರಗೋಜಿ, ಸೇರಿದಂತೆ ಇತರರಿದ್ದರು.