ಆರ್ಯ ಎಸ್., ಗೆ ಪಿಎಚ್‍ಡಿ

ಕಲಬುರಗಿ,ಜೂ.14: ಆರ್ಯ ಎಸ್., ಅವರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿಯ ಅವಶ್ಯಕತೆಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಮತ್ತು ಯುಜಿಸಿ ನಿಯಮಾವಳಿಗೆ ಅನುಗುಣವಾಗಿ ಆಂಗ್ಲ ಭಾಷೆಯಲ್ಲಿ ಡಾಕ್ಟರ್ ಆಫ್ ಫಿಲಾಸಫಿಯನ್ನು ನೀಡಲಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ಕೋಟಾ ಸಾಯಿಕೃಷ್ಣ ಅವರು ತಿಳಿಸಿದ್ದಾರೆ.
ಕೇರಳದ ಆಯ್ದ ಆತ್ಮ ಕಥನಗಳಲ್ಲಿ ಲಿಂಗಾಧರಿತ ಆಕ್ರಮಣ ಎಂಬ ಮಹಾ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಪ್ರೊ. ಬಸವರಾಜ್ ಪಿ. ಡೋಣೂರ್ ಅವರ ಮಾರ್ಗದರ್ಶನದಲ್ಲಿ ಬರೆದು ಸಾದರಪಡಿಸಿದ್ದಾರೆ.
ಕೇರಳದ ಜಯಶ್ರೀ ಮಿಶ್ರಾ, ಸಿಸ್ಟರ್ ಜೆಮ್ಮೆ, ನಳನಿ ಮತ್ತು ಜಮೀಲಾ ಅವರ ಕಾದಂಬರಿಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲಿಂಗಧಾರಿತ ಅಕ್ರಮಣದ ಕುರಿತು ಚರ್ಚೆ ಮಾಡಲಾಗಿದೆ. ಮಹಿಳೆಯನ್ನು ಹೇಗೆ ಲಿಂಗಧಾರಿತ ಹಿಂಸೆಗೆ ಗುರಿಪಡಿಸಲಾಗುತ್ತದೆ ಎಂಬುದರ ಕುರಿತು ತಲಸ್ಪರ್ಶಿ ಅಧ್ಯಯನ ಮಾಡಲಾಗಿದೆ. ಲಿಂಗಧಾರಿತ ಹಿಂಸೆ, ಲಿಂಗಧಾರಿತ ತಾರತಮ್ಯ ಕೇವಲ ಮಹಿಳೆಯರ ಮೇಲೆ ನಡೆಯುತ್ತಿಲ್ಲ ಪುರುಷರ ಮೇಲೂ ನಡೆಯುತ್ತದೆ ಎಂಬ ಚರ್ಚೆಯೂ ಈ ಪ್ರಬಂಧದಲ್ಲಿ ನಡೆದಿದೆ. ವೈಯಕ್ತಿಕ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಲಿಂಗಧಾರಿತ ತಾರತಮ್ಯ, ಕಿರುಕುಳ ನಡೆಯುತ್ತದೆ. ಆದರೆ ಕೇವಲ ಮಹಿಳೆಯರ ಮೇಲೆ ನಡೆಯುವುದಿಲ್ಲ, ಪುರುಷರ ಮೇಲೂ ನಡೆಯುತ್ತದೆ. ಆದರೂ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯದ ಸ್ವರೂಪ ಮತ್ತು ಪರಿಣಾಮ ಭಿನ್ನವಾಗಿರುತ್ತದೆ ಎಂದು ಸಂಶೋಧಕಿ ಪ್ರತಿಪಾದಿಸಿದ್ದಾರೆ.
ಇಂತಹ ಮಹತ್ವದ ಅಧ್ಯಯನ ನನ್ನ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಮಾರ್ಗದರ್ಶಕ ಪ್ರೊ. ಬಸವರಾಜ್ ಡೋಣೂರ್ ಅವರು ಹೇಳಿದರು.