ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಎಂ.ಡಿ. ಭೇಟಿ


ಸಂಜೆವಾಣಿ ವಾರ್ತೆ
ಸಂಡೂರು: ಅ: 19 ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಬೆಂಗಳೂರು, ರವರು ನಿಗಮದ ಜಿಲ್ಲಾ ಅಧಿಕಾರಿಗಳೊಡನೆ ಬಳ್ಳಾರಿ ಜಿಲ್ಲಾ ಸಂಡೂರ ತಾಲ್ಲೂಕಿನ ತೋರಣಗಲ್ಲು ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದ ಆರ್ಯವೈಶ್ಯ ಫಲಾನುಭವಿಗಳ ತಪಾಸಣಾ ಕರ್ತವ್ಯಕ್ಕೆ ಆಗಮಿಸುತ್ತಾರೆ, ಈ ನಡುವೆ ನಮ್ಮ ಸಂಡೂರಿನ ಶ್ರೀಮಾತೆ ವಾಸವಿಕನ್ಯಕಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಶ್ರೀಮಾತೆ ವಾಸವಿಕನ್ಯಕಾಪರಮೇಶ್ವರಿ ದೇವಿಯ ದರ್ಶನ ಪಡೆದು, ತುರ್ತಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು.. ಆರ್ಯವೈಶ್ಯ ಅಭಿವೃದ್ಧಿ ನಿಗಮದ ಯೋಜನೆಗಳ ಮಾಹಿತಿಗಳನ್ನು ತಿಳಿಸಿ ಮತ್ತು ಅವುಗಳ ಯೋಜನೆಗಳ ಅನುಕೂಲ ಪಡೆಯಲು ತಿಳಿಯ ಪಡಿಸಿದರು. ಕಾರ್ಯಕ್ರಮದಲ್ಲಿ ಸಂಡೂರಿನ ಆರ್ಯವೈಶ್ಯ ಸಂಘದ ಕಾರ್ಯದರ್ಶಿಗಳಾದ  ಜಗದೀಶ್ ಶ್ರೇಷ್ಠಿ, ವಾಸವಿ ಫೌಂಡೇಶನ್ ನ ಅಧ್ಯಕ್ಷರಾದ ಎಂ ನಾಗರಾಜ್ ಮತ್ತು ಕಾರ್ಯಾಧ್ಯಕ್ಷರಾದ ವಿಷ್ಣು ಕುಮಾರ್ ಆರ್ ವಿ ವಕೀಲರು, ಸೋವೇನಹಳ್ಳಿ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಸ್ ಟಿ ಲಕ್ಷ್ಮೀಪತಿ, ಸದಸ್ಯರಾದ ರಾಕೇಶ್, ಸಂಡೂರು ಆರ್ಯವೈಶ್ಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ ವಿ ರಾಜೇಶ್, ರಾಘವೇಂದ್ರ, ರಮೇಶ್ ಬಾಬು,  ಕೃಷ್ಣಮೂರ್ತಿ ಶ್ರೇಷ್ಠಿ ಇತರರು ಮತ್ತು ಜಿಲ್ಲಾ ನಿಗಮದ ಅಧಿಕಾರಿಗಳಾದ ಶ್ರೀ ಸಿದ್ದಯ್ಯ-  ರಾಘವೇಂದ್ರ ಹಾಜರಿದ್ದರು; ವಾಸವಿ ಮಹಿಳಾ ಸಂಘದ ಖಜಾಂಚಿಗಳಾದ ಶ್ರೀಮತಿ ಜಿ ವೀಣಾ ರಾಘವೇಂದ್ರ ಇವರು ರಾಜ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಗಣ್ಯರಿಗೆ ಸನ್ಮಾನವನ್ನು ನೆರವೇರಿಸಿದರು.