ಕೋಲಾರ,ಜು.೧೧-ಆರ್ಯವೈಶ್ಯ ಸಮಾಜದ ಶಿಕ್ಷಣದಲ್ಲಿನ ಮೀಸಲಾತಿ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾಪ ಮಾಡುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ ವತಿಯಿಂದ ವಾಸವಿ ಜಯಂತಿಯ ಸಮಾರೋಪ ಸಮಾರಂಭ ಹಾಗೂ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ, ಆರೋಗ್ಯ,ಉದ್ಯೋಗದ ಮೂರು ಅಂಶಗಳು ಬಹಳ ಪ್ರಾಮುಖ್ಯತೆಯನ್ನು ವಹಿಸಲಿದೆ ಆರ್ಯ ವೈಶ್ಯ ಸಮುದಾಯದ ಏಳಿಗೆಗಾಗಿ ಜನಪ್ರತಿನಿಧಿಗಳು ಸದಾ ಕಾಲ ನಿಮ್ಮ ಜೊತೆಗೆ ಇರುತ್ತೇವೆಂದು ಆಶ್ವಾಸನೆ ನೀಡಿದರು,
ಆರ್ಯ ವೈಶ್ಯ ಸಮುದಾಯದ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕ ಶಾಲೆಯನ್ನು ಮತ್ತು ಸಮುದಾಯದ ಕಾರ್ಯಚಟುವಟಿಕೆಗಳಿಗೆ ಸಮುದಾಯ ಭವನಕ್ಕೆ ಬೇಡಿಕೆ ಇಟ್ಟಿದ್ದು ಆದಷ್ಟು ಬೇಗ ಕೊಡಿಸುತ್ತೇವೆ ಸಮುದಾಯದ ಸಮಗ್ರ ಅಭಿವೃದ್ಧಿಗೆ, ಸಂಘಟನೆ, ರಾಜಕೀಯ ಅವಕಾಶ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಗಮನಕ್ಕೆ ತಂದಿದ್ದು, ನಿಮ್ಮ ಆಶಯಕ್ಕೆ ಪೂರಕವಾಗಿ ನಡೆಯುತ್ತೇವೆ ವರ್ಷದಿಂದ ವರ್ಷಕ್ಕೆ ಪ್ರತಿಭಾವಂತರ ಸಂಖ್ಯೆ ಹೆಚ್ಚುತ್ತಿರುವುದು ಶ್ಲಾಘನೀಯ ಇದೇ ರೀತಿ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲು ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು,
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ಆರ್ಯವೈಶ್ಯ ಸಮಾಜವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಸದೃಢರಾಗಿದ್ದರು ಸಹ ಅದರಲ್ಲಿಯೂ ಎಷ್ಟೋ ಬಡ ಕುಟುಂಬಗಳು ಇವೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆರ್ಯವೈಶ್ಯ ಸಮಾಜದ ಮುಖಂಡರು ಶ್ರಮಿಸಬೇಕು. ನಾನು ಕೂಡ ಆರ್ಯವೈಶ್ಯ ಸಮಾಜದ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಸಮುದಾಯ ಭವನಕ್ಕೆ ಸ್ಥಳ ಸೂಚಿಸಿದರೇ ನನ್ನ ಅನುದಾನವನ್ನು ಕೊಡುವ ಜೊತೆಗೆ ಇತರರ ಸಹಕಾರವನ್ನು ಕೊಡಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ ನಾಗೇಶ್, ಖಜಾಂಚಿ ಶ್ರೀನಿವಾಸಮೂರ್ತಿ, ವಾಸವಿ ಮಹಿಳಾ ಅಧ್ಯಕ್ಷೆ ಉಮಾ ರವೀಂದ್ರನಾಥ್, ಮುಖಂಡರಾದ ರೂಪೇಶ್, ರಾಘವೇಂದ್ರ, ರಾಘವೇಂದ್ರಬಾಲಾಜಿ, ಮಂಜುನಾಥ್, ಬದ್ರೀನಾಥ್ ಅಶ್ವಿನ್ ಕುಮಾರ್, ವೈಭವ್ ಮುಂತಾದವರು ಇದ್ದರು.