ಆರ್ಯವೈಶ್ಯ ಸಮಾಜದ ವತಿಯಿಂದ ಶ್ರೀ ರಾಮನವಮಿ

ಹಿರಿಯೂರು.ಮಾ. 31; ಹಿರಿಯೂರು ನಗರದಲ್ಲಿ  ಆರ್ಯವೈಶ್ಯ ಸಮಾಜದ ವತಿಯಿಂದ ಇಲ್ಲಿನ ಕನ್ಯಕಾ  ಪರಮೇಶ್ವರಿ ದೇವಾಲಯದಲ್ಲಿ ಶ್ರೀ ರಾಮನವಮಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಆಚರಿಸಲಾಯಿತು. ಇದರ ಅಂಗವಾಗಿ ಅರ್ಚನೆ, ಅಭಿಷೇಕ, ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಪಟ್ಟಾಭಿ ರಾಮದೇವರ ವೈಭವದ ಮೆರವಣಿಗೆ ನಡೆಯಿತು. ಆರ್ಯವೈಶ್ಯ ಸಮಾಜದ ಮುಖಂಡರಾದ ಎಚ್.ಎಸ್ ನಾಗರಾಜ್ ಗುಪ್ತ, ಎಚ್ ಎಸ್ ಸುಂದರರಾಜ್, ಆರ್ ಪ್ರಕಾಶ್ ಕುಮಾರ್, ಪಿವಿ ನಾಗರಾಜ್  ದೇವರಾಜ್ ಮೂರ್ತಿ, ಬಿಕೆ ನಾಗಣ್ಣ, ಪಿ.ಆರ್ ಸತೀಶ್ ಬಾಬು ,ಶ್ರೀಧರ್ ಅಶೋಕ್ ಕುಮಾರ್, ಮಂಜುನಾಥ್ ಸತ್ಯನಾರಾಯಣ ಶೆಟ್ಟಿ, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ವಿ. ಜಗದೀಶ್, ಆಂಜನೇಯ ಸೇರಿದಂತೆ ಆರ್ಯವೈಶ್ಯ ಸಮಾಜದ ನೂರಾರು ಜನ ಮುಖಂಡರು ಭಾಗವಹಿಸಿದ್ದರು.