ಆರ್ಯವೈಶ್ಯ ಶ್ರೀ ಗಜಾನನ ಉತ್ಸವ ಸಮಾರೋಪ : ಅದ್ದೂರಿ ಮೆರವಣಿಗೆ

ರಾಯಚೂರು-ಸೆ.೧೧- ಆರ್ಯವೈಶ್ಯ ಶ್ರೀ ಗಜಾನನ ಉತ್ಸವ ಸಮಿತಿಯು ಗೀತಾ ಮಂದಿರದಿಂದ ಗಜಾನನ ಉತ್ಸವದ ಸಮರೋಪ ಸಮಾರಂಭದ ಕಾರ್ಯಕ್ರಮ ಹಾಗೂ ಮೆರವಣಿಗೆಯು ಗೀತಾ ಮಂದಿರದಿಂದ ರಾಯಚೂರು ನಗರದ ಪ್ರಮುಖ ರಸ್ತೆಗಳ ಮೂಲಕ ಅತಿ ವಿಜ್ರಂಬಣೆಯಿಂದ ನೆರವೇರಿತು ಈ ಒಂದು ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಗಜಾನನ ಸಮಿತಿಯ ಅಧ್ಯಕ್ಷರಾದ ಸಾವಿತ್ರಿ ಶ್ರೀಹರ್ಷರವರ ನೇತೃತ್ವದಲ್ಲಿ ನಡೆಯಿತು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಸಂಸದರಾದ ರಾಜಾ ಅಮರೇಶ್ವರ ನಾಯಕ ರವರು ಇನ್ನೋರ್ವ ಮುಖ್ಯ ಅತಿಥಿಗಳಾಗಿ ಜನಪ್ರಿಯ ಶಾಸಕರಾದ ಡಾ. ಶಿವರಾಜ್ ಪಾಟೀಲ್ ರವರು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷರಾದ ಹಾಗೂ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಲಲಿತ ಕಡಗೋಳ್, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಯಾಪಚೆಟ್ಟು ಗೋಪಾಲ್ ರೆಡ್ಡಿ, ಬಿಜೆಪಿ ರಾಯಚೂರು ನಗರ ಅಧ್ಯಕ್ಷರಾದ ಹಾಗೂ ಗೀತಾ ಮಂದಿರದ ಗೌರವಾಧ್ಯಕ್ಷರಾದ ಬಿ. ಗೋವಿಂದ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗೀತಾ ಮಂದಿರದ ಅಧ್ಯಕ್ಷರಾದ ಗಾಣದಾಳ್ ಲಕ್ಷ್ಮಿಪತಿ,ನಗರಸಭೆ ಸದಸ್ಯರಾದ ನರಸರೆಡ್ಡಿ, ಆರ್ಯವೈಶ್ಯ ಸಮಾಜದ ಕಲ್ಯಾಣ ಮಂಟಪ ಕಟ್ಟಡ ಸಮಿತಿ ಅಧ್ಯಕ್ಷರಾದ ಕೆ. ಭೀಮಾಶಂಕರ್ ,ಆರ್ಯವೈಶ್ಯ ಸಮಾಜದ ಉಪಾಧ್ಯಕ್ಷರಾದ ಇಲ್ಲೂರು ಗೋಪಾಲಯ್ಯ ಶೆಟ್ಟಿ, ಆರ್ಯವೈಶ್ಯ ಗಜಾನನ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಂ.ಆರ್ .ಸತೀಶ್, ಕೊಂಡ ಹನುಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಎಂ. ಆರ್. ಶ್ರೀಕಾಂತ್, ಕೋಶಾಧ್ಯಕ್ಷರಾದ ಬುರುದಿಪಾಡ್ ರಾಘವೇಂದ್ರ ರವರು
ಮುಖ್ಯ ಅತಿಥಿಗಳಾದ ಶಾಸಕರು ಶಿವರಾಜ್ ಪಾಟೀಲ್ ರವರು ಮಾತನಾಡಿ ರಾಯಚೂರಿನಲ್ಲಿ ಗೀತಾ ಮಂದಿರದ ಗಣೇಶವು ತುಂಬಾ ವಿಶೇಷ ಆಕರ್ಷಣೀಯವಾಗಿದ್ದು ಹಾಗೂ ವಿಭಿನ್ನ ಅಲಂಕಾರ ಹಾಗೂ ವಿವಿಧ ವಾದ್ಯ ಮೇಳಗಳಿಂದ ಜನಾಕರ್ಷಣೆ ಹೊಂದಿರುತ್ತದೆ ಆರ್ಯವೈಶ್ಯ ಸಮಾಜ ಬಾಂಧವರು ತುಂಬಾ ಅಚ್ಚುಕಟ್ಟಾಗಿ ಗಣೇಶೋತ್ಸವವನ್ನು ಕಳೆದ ೩೫ ವರ್ಷಗಳಿಂದ ನೆರವೇರಿಸುತ್ತಾ ಬಂದಿದ್ದಾರೆ ಇದು ರಾಯಚೂರ್ ತಾಲೂಕಿಗೆ ಮಾದರಿಯಾಗಿದೆ ಎಂದರು, ಸಂಸದರಾದ ರಾಜಾ ಅಮರೇಶ್ವರ ನಾಯಕ್ ರವರು ಮಾತನಾಡಿ ರಾಯಚೂರಿನಲ್ಲಿ ಆರ್ಯವೈಶ್ಯ ಬಾಂದವರ ಗೀತಾ ಮಂದಿರ ಗಣೇಶವು ಬಹಳ ಆಕರ್ಷಣೆ ಹೊಂದಿದ್ದು ಆರ್ಯವೈಶ್ಯ ಸಮಾಜದವರು ಯಾವುದೇ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಐಕ್ಯತೆಯಿಂದ ನೆರವೇರಿಸುತ್ತಾರೆ ನನಗೆ ಆರ್ಯವೈಶ್ಯ ಬಾಂದವರ ಒಡನಾಟ ಬಾಲ್ಯದಿಂದಲೂ ಇದೆ ಎಂದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಹಾಗೂ ದಾನಿಗಳಿಗೆ ಗಜಾನನ ಉತ್ಸವ ಸಮಿತಿಯಿಂದ ಸನ್ಮಾನಿಸಿ ಗೌರವಿಸಿದರು, ಈ ಮೆರವಣಿಗೆಯು ಆರ್ಯವೈಶ್ಯ ಸಮಾಜ ಬಾಂಧವರು, ಮಹಿಳೆಯರು ಯುವಕ – ಯುವತಿಯರು ನೃತ್ಯ ಕೋಲಾಟ ಹಾಗೂ ಡೊಳ್ಳು ಕುಣಿತ ದೊಂದಿಗೆ ಮೆರವಣಿಗೆಯಲ್ಲಿ ಗಣೇಶನಿಗೆ ಜೈಕಾರ ಹಾಕುತ್ತಾ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟರು ಮೆರವಣಿಗೆಯಲ್ಲಿ ವಿಶೇಷ ವಾಗಿ ವಿಶೇಷ ಹುವಿನಿಂದ ಅಲಂಕೃತವಾದ ರಥೋತ್ಸವದೊಂದಿಗೆ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಪಂಜಾಬ್ ವಿವಿಧ ರಾಜ್ಯಗಳಿಂದ ಆಗಮಿಸಿದ ತಂಡಗಳ ನೃತ್ಯ ರೂಪಕಗಳಿಂದ ನೋಡುಗರಿಗೆ ರಸದೌತಣ ನೀಡಿತು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ಸ್ವಾಗತವನ್ನು ಗಜಾನನ ಉತ್ಸವ ಸಮಿತಿ ಅಧ್ಯಕ್ಷರಾದ ಸಾವಿತ್ರಿ ಶ್ರೀಹರ್ಷ ರವರು ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಕೆ.ಸಿ. ವೀರೇಶ್ ವಕೀಲರು ನೆರವೇರಿಸಿದರು, ವಂದನಾರ್ಪಣೆಯನ್ನು ಗಜಾನನ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಎಂ.ಆರ್.ಶ್ರೀಕಾಂತ್ ರವರು ನೆರವೇರಿಸಿದರು.