ಆರ್ಯವೈಶ್ಯ ತಿಮ್ಮಾಪೂರ ಪೇಟೆ ಸಂಘದ ವತಿಯಿಂದ ಗ್ರಾ.ಪಂ. ಸದಸ್ಯೆ ಎಂ.ಜ್ಯೋತಿಗೆ ಸನ್ಮಾನ

ರಾಯಚೂರು.ಜ.೧-ನಿನ್ನೆ ತಾನೆ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಬಂದಿದ್ದು ಗಾಣಧಾಳ ಗ್ರಾಮ ಪಂಚಾಯತಿಗೆ ಚಿಕ್ಕ ಮಂಚಾಲಿ ಗ್ರಾಮದಿಂದ ಅವಿರೋಧವಾಗಿ ಆಯ್ಕೆಯಾದ ಎಂ.ಜ್ಯೋತಿ ಭೀಮಯ್ಯ ರವರನ್ನು ಬೆಳಿಗ್ಗೆ ರಾಯಚೂರಿನ ಆರ್ಯವೈಶ್ಯ ಸಂಘ ತಿಮ್ಮಾಪೂರ ಪೇಟೆ ವತಿಯಿಂದ ಚಿಕ್ಕ ಮಂಚಾಲಿ ಗ್ರಾಮಕ್ಕೆ ತೆರಳಿ ನೂತನ ಗ್ರಾಮ ಪಂಚಾಯತಿ ಸದಸ್ಯೆಗೆ ಸನ್ಮಾನಿಸಿ ಗೌರವಿಸಲಾಯಿತು.
ಆರಂಭದಲ್ಲಿ ಸಾಹಿತಿ ಪಲುಗುಲ ನಾಗರಾಜ ರವರು ಮಾತನಾಡಿ ಆರ್ಯವೈಶ್ಯ ಸಮುದಾಯ ಸಂಖ್ಯೆಯಲ್ಲಿ ಬಹಳ ಕಡಿಮೆಯಿದೆ ಅದರಲ್ಲೂ ಚಿಕ್ಕ ಮಂಚಾಲಿ ಗ್ರಾಮದಲ್ಲಿ ಕೇವಲ ಮೂರು ಮನೆಗಳಿದ್ದು ಸಹ ಗ್ರಾಮಸ್ಥರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಗ್ರಾಮ ಪಂಚಾಯತಿ ಅವಿರೋಧವಾಗಿ ಆಯ್ಕೆಯಾಗಿರುವದು ಸಂತಸದ ವಿಷಯ ಎಂದರು.
ಆರ್ಯವೈಶ್ಯ ತಿಮ್ಮಾಪೂರ ಪೇಟೆ ಸಂಘದ ಅಧ್ಯಕ್ಷ ದೇವನಪಲ್ಲಿ ಯಂಕಣ್ಣ ಶೆಟ್ಟಿ ಯವರು ಮಾತನಾಡಿ ನಮ್ಮ ಸಮಾಜದ ವ್ಯಕ್ತಿಯನ್ನು ಗಾಣಧಾಳ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆ ಮಾಡುವಲ್ಲಿ ಚಿಕ್ಕ ಮಂಚಾಲಿ ಗ್ರಾಮದ ಕೊಡುಗೆ ಮೆಚ್ಚುವಂತದ್ದು ಇಡೀ ಗ್ರಾಮದ ಜನರಿಗೆ ತುಂಬು ಹೃದಯದ ಅಭಿನಂದನೆಗಳು ಜೊತೆಗೆ ಆಯ್ಕೆಯಾದ ಎಂ.ಜ್ಯೋತಿ ಭೀಮಯ್ಯ ರವರು ಗ್ರಾಮ ಪಂಚಾಯತಿಗೆ ಬರುವ ಸರಕಾರದ ಸೌಲಭ್ಯಗಳನ್ನು ಗ್ರಾಮಕ್ಕೆ ತಲುಪಿಸುವಲ್ಲಿ ನಿಸ್ವಾರ್ಥದಿಂದ ಸೇವೆ ಮಾಡಲು ತಿಳಿಸಿದರು. ಕರ್ನಾಟಕ ಆರ್ಯವೈಶ್ಯ ಮಹಾಸಭ ನಿರ್ದೇಶಕ ಪಿ.ಗಿಡ್ಡಯ್ಯ ರವರು ಸಹ ಮಾತನಾಡಿ. ಗಾಣಧಾಳ ರಾಘಯ್ಯ ವೇದಿಕೆಯಲ್ಲಿದ್ದರು.
ನೂತನವಾಗಿ ಆಯ್ಕೆಯಾದ ಗಾಣಧಾಳ ಗ್ರಾಮ ಪಂಚಾಯತಿ ಸದಸ್ಯೆ ಎಂ.ಜ್ಯೋತಿ ಭೀಮಯ್ಯ ರವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆರ್ಯವೈಶ್ಯ ತಿಮ್ಮಾಪೂರ ಪೇಟೆ ಸಂಘದ ಗಾರಾ ಶಂಕರ , ಪೋಲಂಪಲ್ಲಿ ಗುರುರಾಜ , ವೀರಂ ಹನುಮಂತಯ್ಯ , ರಾಜೊಳ್ಳಿ ಹನುಮಂತಯ್ಯ, ಎಲ್.ವಿಜಯ ಕುಮಾರ , ದೇವನಪಲ್ಲಿ ವಿಜಯ ಕುಮಾರ, ಕೆ.ಸತ್ಯನಾರಾಯಣ, ರಾಘವೇಂದ್ರ ಗುಪ್ತ, ಕೆ.ರಾಮಕೃಷ್ಣ, ಎನ್. ಸುನಿಲ್ ಕುಮಾರ, ಗಾಣಧಾಳ ಗ್ರಾಮದ ವಿ.ಯಂಕಣ್ಣ ಶೆಟ್ಟಿ, ಎ.ಭೀಮಯ್ಯ ಶೆಟ್ಟಿ, ಎ.ಸಂತೋಷ. ಪಿ.ಗಿರಿಧರ ರವರು ಹಾಜರಿದ್ದರು.