ಆರ್ಯವೈಶ್ಯ ಅಭಿವೃದ್ಧಿ ನಿಗಮ:ಅಕ್ರಮ ನೇಮಕ-ಆರೋಪ

ರಾಯಚೂರು.ನ.4-ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ನಂತರ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಡಿ.ಎಸ್.ಅರುಣ ಕುಮಾರ ರವರನ್ನು ನೇಮಕ ಮಾಡಲಾಯಿತು.
ಅಧಿಕಾರ ಸ್ವೀಕರಿಸಿ ಒಂದು ವರ್ಷದ ನಂತರ ಈಗ ನಿಗಮ ಮಂಡಳಿಯ ನಿರ್ದೇಶಕ ಸ್ಥಾನಗಳನ್ನು ಭರ್ತಿ ಮಾಡಿದೆ ಆದರೆ ಬಿಜೆಪಿ ಪಕ್ಷದವರು ಅಲ್ಲದೇ ಇರುವ ಆರ್ಯವೈಶ್ಯರಿಗೆ ಅಧಿಕಾರ ನೀಡಿ ನಿಜವಾದ ಆರ್ಯವೈಶ್ಯ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಹೀಗಾಗಿ ನಿಗಮ ಮಂಡಳಿಯ ನಿರ್ದೇಶಕರ ನೇಮಕಾತಿ ಆದೇಶವನ್ನು ವಜಾ ಮಾಡಲು ಬಿಜೆಪಿ ಪಕ್ಷದಲ್ಲಿ 15 ವರ್ಷಗಳಿಂದ ದುಡಿದ ಪಲುಗುಲ ನಾಗರಾಜ ರವರು ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ರವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆರ್ಯವೈಶ್ಯ ಸಮಾಜದಲಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವದೇ ಅಪರೂಪ ಅಂತಹದರಲ್ಲಿ ಬಿಜೆಪಿಯಲ್ಲಿ ನಿಷ್ಠಾವಂತರಾಗಿ ನಾನು ಕೆಲಸ ಮಾಡಿದ್ದೇನೆ 3 ವಿಧಾನ ಸಭಾ ಚುನಾವಣೆಯಲ್ಲಿ , 2 ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ ನಗರ ಘಟಕ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿದ್ದೇನೆ ಆದರೆ ಇಂದು ನಮ್ಮಂತಹ ಕಾರ್ಯಕರ್ತರಿಗೆ ಸಿಗಬೇಕಾದ ಅವಕಾಶವನ್ನು ಪಕ್ಷಕ್ಕೆ ಸಂಬಂಧವೇ ಇರದ ವ್ಯಕ್ತಿಗಳಿಗೆ ನೀಡಿರುವದು ಸರಿಯೇ..?. ನನ್ನಂತೆ ದಶಕಗಳಿಂದ ರಾಜ್ಯಾದ್ಯಂತ ಆರ್ಯವೈಶ್ಯ ಕಾರ್ಯಕರ್ತರು ನಿಷ್ಠೆಯಿಂದ ದುಡಿಯುತ್ತಿದ್ದಾರೆ ಇಂದಲ್ಲ ನಾಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಗಮ ಮಂಡಳಿಯಲ್ಲಿ ಅವಕಾಶ ಸಿಗಬಹುದು ಎಂದಿರುವ ಕಾರ್ಯಕರ್ತರಿಗೆ ನಿರಾಸೆ ಆಗಿರುತ್ತದೆ . ಪಕ್ಷಕ್ಕೆ ಸಂಬಂಧವೇ ಇರದ ವ್ಯಕ್ತಿಗಳು ತಮ್ಮ ಶ್ರೀಮಂತಿಕೆ ಪ್ರಭಾವವನ್ನು ಬಳಸಿಕೊಂಡು ಕೇಂದ್ರ ಸಚಿವರಿಂದ , ರಾಜ್ಯ ಸಚಿವರಿಂದ ,ಶಾಸಕರುಗಳಿಂದ ಶಿಫಾರಸ್ಸು ಪತ್ರ ತೆಗೆದುಕೊಂಡು ಅಧಿಕಾರವನ್ನು ಗಿಟ್ಟಿಸಿಕೊಂಡಿರುತ್ತಾರೆ ಹೀಗಾದರೆ ಮುಂದೆ ಸಮುದಾಯದ ವ್ಯಕ್ತಿಗಳು ಯಾವ ಹಿತಕ್ಕಾಗಿ ದುಡಿಯಬೇಕು ಇದು ಪಕ್ಷದ ಶಿಸ್ತು ಉಲ್ಲಂಘನೆ ಹೀಗಾಗಿ ಈಗ ನೇಮಕಗೊಂಡ ಪಕ್ಷದವರು ಅಲ್ಲದ ವ್ಯಕ್ತಿಗಳ ಸ್ಥಾನಗಳನ್ನು ವಜಾಗೊಳಿಸಿ ನಿಜವಾಗಿ ಪಕ್ಷದ ಸೇವೆ ದಲ್ಲಿಸಿದ ವ್ಯಕ್ತಿಗಳಿಗೆ ನಿರ್ದೇಶಕ ಸ್ಥಾನಗಳನ್ನು ನೀಡಬೇಕೆಂದು ಪಲುಗುಲ ನಾಗರಾಜ ರವರು ಪತ್ರದಲ್ಲಿ ವಿನಂತಿಸಿರುತ್ತಾರೆ.