ಆರ್ಯಭಟ ಪ್ರಶಸ್ತಿಗೆ ವೈದ್ಯ ಡಾ.ಕ್ಯಾಲಕೊಂಡ ಆಯ್ಕೆ

ಬಾದಾಮಿ,ಮೇ30: ವೈದ್ಯಕೀಯ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಸಂಸ್ಕøತಿ ಸಂಘಟನೆಯು ಪ್ರತಿ ವರ್ಷ ಕೊಡಮಾಡುವ 2024 ನೇ ಸಾಲಿನ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ನಗರದ ಸಾಹಿತಿ, ವೈದ್ಯ ಡಾ.ಕರವೀರಪ್ರಭು ಕ್ಯಾಲಕೊಂಡ ಆಯ್ಕೆಯಾಗಿದ್ದಾರೆ.
ಡಾ.ಕರವೀರಪ್ರಭು ಕ್ಯಾಲಕೊಂಡ ಇವರು ಜಿಲ್ಲಾ ಸರ್ಜನ್ ಆಗಿ ಸೇವೆ ಸಲ್ಲಿಸಿ ಸಾಹಿತ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ. ಜೂನ್ 23 ರಂದು ಸಂಜೆ 6.30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ಎನ್.ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.