ಆರ್ಯನ್ ಡ್ರಗ್ಸ್ ಪ್ರಕರಣ : ಅಧಿಕಾರಿ ಸಮೀರ್‌ಗೆ ಕೊಕ್

ಮುಂಬೈ,ನ.೬- ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಮಾದಕವಸ್ತು ನಿಗ್ರಹ ಪಡೆ -ಎನ್ ಸಿಬಿ ತನಿಖಾಧಿಕಾರಿಯಿಂದ ಸಮೀರ್ ವಾಂಖೆಡೆಗೆ ಕೊಕ್ ನೀಡಲಾಗಿದೆ.
ಸಮೀರ್ ವಾಂಖೆಡೆ ಜಾಗಕ್ಕೆ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಸಿಂಗ್ ಅವರನ್ನು ನಿಯೋಜಿಸಲಾಗಿದೆ.
ಮಾದಕವಸ್ತು ನಿಗ್ರಹ ಪಡೆ ತನಿಖಾಧಿಕಾರಿಯಿಂದ ಸಮೀರ್ ವಾಂಖೆಡೆ ಮುಕ್ತಗೊಳಿಸಲಾಗಿದ್ದರೂ ಅವರನ್ನು ಎನ್ ಸಿಬಿ ವಲಯ ನಿರ್ದೇಶಕರಾಗಿ ಮುಂದುವರೆಸಲಾಗಿದೆ ಎಂದು ರಾಷ್ಟ್ರೀಯ ಮಾದಕವಸ್ತು ನಿಗ್ರಹ ಪಡೆ ತಿಳಿಸಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗಾಗಿ ೨೫ ಕೋಟಿ ರೂಪಾಯಿ ಲಂಚ ಕೇಳಿದ್ದರು ಎನ್ನುವ ಪ್ರಕರಣ ಮಹಾರಾಷ್ಟ್ರದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಕುರಿತಂತೆ ಸಮೀರ್ ವಾಂಖೆಡೆ ವಿರುದ್ಧ ಆಂತರಿಕ ತನಿಖೆಗೆ ಆದೇಶ ನೀಡಿರುವ ಬೆಂಬಲ ಅವರಿಗೆ ತನಿಖಾಧಿಕಾರಿಯಿಂದ ಕೊಕ್ ನೀಡಲಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ರ ಆರ್ಯನ್ ಖಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದ ಮಾದಕ ವಸ್ತು ಪ್ರಕರಣವನ್ನು ದೆಹಲಿಯ ಕೇಂದ್ರ ಕಚೇರಿಯ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ.