
ಬೆಂಗಳೂರು, ಏ. ೫- ಮುಂದಿನ ತಿಂಗಳು ಮೇ ೧೦ ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷದ ವತಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಗರದ ಪ್ರೆಸ್ ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ.ಐ. (ಬಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್. ಮೂರ್ತಿ ಅವರು ಪಟ್ಟಿ ಬಿಡುಗಡೆ ಮಾಡಿದರು. ಒಟ್ಟು ೧೨ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಏ. ೧೨ರ ಒಳಗೆ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಆರ್.ಪಿ.ಐ(ಬಿ) ಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಎನ್. ಅಟ್ಟಯ್ಯ ತುರುವೇಕೆರೆ ಕ್ಷೇತ್ರ, ಗವಿಸಿದ್ಧನಗೌಡ, ಚನ್ನನಗೌಡ ಮಾಲಿ ಪಾಟೀಲ, ಕುಷ್ಟಗಿ ಕ್ಷೇತ್ರ, ರಾಮಲಿಂಗಪ್ಪ, ಯಲಬುರ್ಗಾ ಕ್ಷೇತ್ರ, ಡಾ. ಬಿ. ಜ್ಞಾನ ಸುಂದರ, ಕನಕಗಿರಿ ಮೀಸಲು ಕ್ಷೇತ್ರ, ಪದ್ಮಾವತಿ, ಗಂಗಾವತಿ ಕ್ಷೇತ್ರ, ಜಿ. ನಂದಕುಮಾರ್, ಹಗರಿ ಬೊಮ್ಮನಹಳ್ಳಿ ಮೀಸಲು ಕ್ಷೇತ್ರ, ಶಾಂತಪ್ಪ ಚಿತ್ರಾಲಿ, ರಾಯಚೂರು ನಗರ ಕ್ಷೇತ್ರ, ರವಿಕುಮಾರ್ ನಾಯಕ ಗೋನಾಳ, ರಾಯಚೂರು ಗ್ರಾಮಾಂತರ ಕ್ಷೇತ್ರ (ಎಸ್.ಟಿ. ಮೀಸಲು) ವೀರೇಶ್ ನಾಯಕ ನಿರಮಾನವಿ, ಮಾನವಿ ಕ್ಷೇತ್ರ (ಎಸ್.ಟಿ. ಮೀಸಲು) ಎಸ್. ಮಾರುತಿ ನಾಯಕ, ಮಸ್ಕಿ ಕ್ಷೇತ್ರ(ಎಸ್.ಟಿ. ಮೀಸಲು), ಬಸವರಾಜ ಕುಣಿಕಲ್ಲೂರು, ಲಿಂಗಸೂರು ಕ್ಷೇತ್ರ (ಎಸ್.ಸಿ. ಮೀಸಲು) ಬಸವರಾಜ ಸಿಂದನೂರು, ಸಾಮಾನ್ಯ ವಿಧಾನಸಭಾ ಕ್ಷೇತ್ರ, ರಾಯಚೂರು ಜಿಲ್ಲೆ.