ಆರ್ಥಿಕ ಸದೃಢತೆಗೆ ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ

ಭಾಲ್ಕಿ:ಮಾ.3:ರೈತರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅನ್ನದಾತರು ಅವುಗಳ ಲಾಭ ಪಡೆದುಕೊಂಡು ಆರ್ಥಿಕ ಸದೃಢತೆ ಸಾಧಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ ಜೈ ಸಂತೋಷಿ ಮಾತಾ ರೂರಲ್ ಡೆವಲಪಮೆಂಟ್ ಎನ್.ಜಿ.ಓ ವತಿಯಿಂದ ನೂತನವಾಗಿ ನಿರ್ಮಿಸಿದ ಗ್ರಾಮೀಣ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು.

ನಬಾರ್ಡ್ ಯೋಜನಾಧಿಕಾರಿ ರಾಮರಾವ್ ಡಿ. ಮಾತನಾಡಿ, ದಲ್ಲಾಳಿಗಳ ಹಾವಳಿ ತಪ್ಪಿಸಿ ರೈತರೇ ನೇರ ಖರೀದಿ, ಮಾರಾಟ ಮಾಡಲು ಗ್ರಾಮೀಣ ಸಂತೆ ಸಹಕಾರಿ ಎಂದು ತಿಳಿಸಿದರು.

ಜೈ ಸಂತೋಷಿ ಮಾತಾ ರೂರಲ್ ಡೆವಲಪಮೆಂಟ್ ಎನ್. ಜಿ. ಓ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಮೂಲಗೆ ಮಾತನಾಡಿದರು.

ಹಲಬರ್ಗಾ ರಾಚೊಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಅನ್ನದಾತರನ್ನು ಸನ್ಮಾನಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ, ಮ ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ನರಸಪ್ಪ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ
ವಿಶ್ವನಾಥ, ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿಕಾ ಮಹೇಶ, ಪ್ರಮುಖರಾದ ಭಾಗ್ಯಲಕ್ಷ್ಮಿ , ವೈಜಿನಾಥ ಮೂಲಗೆ, ಉದಯ ಮೂಲಗೆ, ರಾಜಕುಮಾರ ಮೂಲಗೆ, ಪ್ರಕಾಶ ಪ್ರಭಾ, ಸಂಜು ಪ್ರಭಾ, ಶಿವಕುಮಾರ ಬಿರಾದಾರ, ರಾಜು ಕುಂಬಾರ,
ಮಹೇಶ್ ಸ್ವಾಮಿ ಸೇರಿದಂತೆ ಇತರರು ಇದ್ದರು.

ದೀಪಕ ಠಮಕೆ ನಿರೂಪಿಸಿ, ವಂದಿಸಿದರು.