ಆರ್ಥಿಕ ಪ್ರಗತಿ ಚೇತರಿಕೆಗೆ ಬಿಜೆಪಿ ಸರ್ಕಾರದ ಸಾಧನೆ ಕಾರಣ

ಹರಪನಹಳ್ಳಿ.ಮಾ.೨೭ : ನೆರೆ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವಿಸಿದ್ದರೂ, ದೇಶದಲ್ಲಿ ಆರ್ಥಿಕ ಪ್ರಗತಿ ಚೇತರಿಕೆಗೆ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಕಾರಣವಾಗಿವೆ ಪಾಕಿಸ್ತಾನ,ಚೀನಾ,ಅನ್ಯ ದೇಶಗಳಿಗೆ ಮೋದಿ ಪ್ರಧಾನಿಯಾಗಬೇಕು ಎಂದು ಕರೆಯುತ್ತಿದ್ದರು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರೆಗಳ ನೀರು ತುಂಬಿಸುವ ಯೋಜನೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಮಹತ್ವಪೂರ್ಣ ಯೋಜನೆಯಾಗಿದೆ. ಯೋಜನೆ ಸಾಕಾರಗೊಂಡಿದ್ದು, ಮುಂದಿನ ಸೆಪ್ಟೆಂಬರ್ ತಿಂಗಳೊಳಗೆ ಜಗಳೂರು ಹಾಗೂ ಹರಪನಹಳ್ಳಿ ಎಲ್ಲಾ ತಾಲ್ಲೂಕಿನ ಕೆರೆಗಳು ಭರ್ತಿಯಾಗಲಿದೆ ಎಂದು ತಿಳಿಸಿದರು.ಈಚೆಗೆ ದಾವಣಗೆರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯಿಂದ ಪಕ್ಷದ ಉತ್ಸಾಹ ಹೆಚ್ಚಿದೆ. 150 ಕ್ಷೇತ್ರ ಗೆಲ್ಲಲು ಮೋದಿ ಅವರು ಪಣ ತೊಟ್ಟಿದ್ದು, ರಾಜ್ಯಕ್ಕೆ ಮತ್ತೆ ಭೇಟಿ ನೀಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ವಜನಾಂಗದ ಕಳಕಳಿ ಇಟ್ಟುಕೊಂಡು ಎಲ್ಲಾ ಸಮಯದಯಗಳ ಬೆಡಿಕೆಯ ಮೀಸಲಾತಿ ಒದಗಿಸಿ 3 ದಶಕದ ದಲಿತ ಸಮುದಾಯದ ಬಹುದಿನಗಳ ಬೆಡಿಕೆ ಒಳ ಮಿಸಲಾತಿಯನ್ನು ಜಾರಿಗೊಳಿಸಿ ಸರ್ವ ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಒತ್ತು ನೀಡಿದ್ದಾರೆ. ಕ್ಷೇತ್ರದಲ್ಲಿ ಕೆ.ಕೆ.ಆರ್.ಡಿ.ಬಿ ಇಲಾಖೆಯಿಂದ 400ಕ್ಕೂ ಅಧಿಕ ಶಾಲಾ ಕೊಠಡಿಗಳನ್ನು ನಿರ್ಮಿಸಿ ಶಾಸಕ ಜಿ.ಕರುಣಾಕರ ರೆಡ್ಡಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ ನೀಡುವ ಮೂಲಕ ಮರು ಆಯ್ಕೆ ಮಾಡಬೇಕು ಎಂದು ಹೇಳಿದರು.