ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ; ಕಡ್ಲಿಮಟ್ಟಿ

ಬಾದಾಮಿ, ಮೇ3:ಕೋವಿಡ್ ಎರಡನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಎ.28 ರಿಂದ ಮೇ 12 ರ ವರೆಗೆ 14 ದಿನಗಳ ಜನತಾ ಕಫ್ರ್ಯೂ ಜಾರಿಗೆ ತಂದಿರುವ ಕಾರಣ ಜನಸಾಮಾನ್ಯರಿಗೆ ಬಹಳ ತೊಂದರೆಯಾಗಿದೆ.
ಬಡಜನರು, ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಹಾಗೂ ಬಿ.ಪಿ.ಎಲ್., ಅಂತ್ಯೋದಯ ಕಾರ್ಡ್ ಹೊಂದಿದ ಪ್ರತಿ ಫಲಾನುಭವಿಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ ರೂ.20 ಸಾವಿರ ಹಣ ಖಾತೆಗೆ ಜಮಾ ಮಾಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್ ಅಧ್ಯಕ್ಷ, ಶೋಷಿತ ಸುದಾಯಗಳ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯ್ತಿ ಸದಸ್ಯ ಬಸಪ್ಪ ಕಡ್ಲಿಮಟ್ಟಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.