ಆರ್ಥಿಕ ಪರಿಹಾರಕ್ಕೆ ಆಗ್ರಹಿಸಿ ಸ್ಲಂ ನಿವಾಸಿಗಳ ಪ್ರತಿಭಟನೆ

ಕಲಬುರಗಿ,ಮೇ.21- ಕೋವಿಡ್ ಲಾಕ್‍ಡೌನ್ ಹಿನ್ನಲೆಯಲ್ಲಿ ಎಲ್ಲ ಬಿಪಿಎಲ್ ಪಡಿತರ ಚೀಟಿದಾರರಿಗೆ ಮತ್ತು ಸ್ಲಂ ನಿವಾಸಿಗಳಿಗೆ ತಲಾ 10 ಸಾವಿರ ರೂ.ಗಳ ಆರ್ಥಿಕ ಪರಿಹಾರ ಹಾಗೂ ಉಚಿತ ಪಡಿತರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಲು ಆಗ್ರಹಿಸಿ ಸ್ಲಂ ಜನಾಂದೋಲನಾ ಕರ್ನಾಟಕ ಸಂಘಟನೆ ನೇತೃತ್ವದಲ್ಲಿಂದು ಪ್ರತಿಭಟನೆ ಕೈಗೊಳ್ಳಲಾಯಿತು.
ರಾಷ್ಟ್ರೀಯ ವಿಪತ್ತು ಪರಿಹಾರದಡಿ 3 ತಿಂಗಳ ಕಾಲ ಸ್ಲಂ ನಿವಾಸಿಗಳಿಗೆ ಆರ್ಥಿಕ ಪರಿಹಾರ, ಅಗತ್ಯವಸ್ತು, ಪಡಿತರ ವಿತರಿಸಬೇಕು, ಎಲ್ಲ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆ ಮತ್ತು ಚಿಕಿತ್ಸೆ ಕಲ್ಪಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಇಲ್ಲಿನ ಅಧಿಕಾರಿಗಳ ಮುಖಾಂತ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನಾ ಪ್ರದರ್ಶನದಲ್ಲಿ ಸುನೀತಾ ಕೊಲ್ಲೂರ, ರೇಣುಕಾ ಸರಡಗಿ, ರಾಶಿ ರಾಠೋಡ, ಶಾರದಾ ಹಿರೇಬಜಾರ, ನಿಲಮ್ಮ ಸುಕನ್ಯ, ಸಂಗೀತಾ ತಳವಾರ, ಗೌರಮ್ಮ, ಮಕಾ, ರತ್ನಮ್ಮ ದುತ್ತರಗಾಂವ ಸೇರಿದಂತೆ ಹಲವರು ಭಾಗವಹಿಸಿದ್ದರು.