ಆರ್ಥಿಕ ಅಪರಾದಿ ನೀರವ್ ಮೋದಿ: ಭಾರತಕ್ಕೆ ಗಡಿಪಾರು ಇಂಗ್ಲೆಂಡ್ ಸಮ್ಮಿತಿ

ಲಂಡನ್.ಏ.16- ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಹಾಗೂ ಆರ್ಥಿಕ ಅಪರಾಧಿ‌ ನೀರವ್ ಮೋದಿ, ಭಾರತಕ್ಕೆ ಹಸ್ತಾಂತರಿಸಲು ಇಂಗ್ಲೆಂಡ್ ಸಮ್ಮತಿ ಸೂಚಿಸಿದೆ.‌

ನೀರವ್ ಮೋದಿ ಹಸ್ತಾಂತರ‌ ಸಂಬಂಧ ಇಂಗ್ಲೆಂಡ್ ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಗಡಿಪಾರು ಮಾಡುವ ಪ್ರಕ್ರಿಯೆಗೆ ಸಹಿ‌ಹಾಕಿದ್ದಾರೆ. ಹೀಗಾಗಿ ಕಾನೂನು ಪ್ರಕದರಿಯ ಆರಂಭವಾಗಿದೆ.

ಭಾರತಕ್ಕೆ ಗಡಿ ಪಾರು ಮಾಡುವ ಕುರಿತು ನೀರವ್ ಮೋದಿ ಇಂಗ್ಲೆಂಡ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಭಾರತ ಸರ್ಕಾರ ತೀರ್ಪು ನೀಡಿತ್ತು.

ಹೀಗಾಗಿ ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ,ಗಡಿ ಪಾರು ಮಾಡುವ ಆದೇಶಕ್ಕೆ ಸಹಿ ಹಾಕಿದ್ದು ಅನಿವಾರ್ಯವಾಗಿ ವಂಚಕ‌ ನೀರವ್ ಮೋದಿ ಭಾರತಕ್ಕೆ ಬರದೆ ಅನ್ಯ ಮಾರ್ಗವಿಲ್ಲ.

ನೀರವ್ ಮೋದಿ ಭಾರತಕ್ಕೆ ಹಸ್ತಾಂತರ ವಾಗುತ್ತಿದ್ದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತಮ್ಮ ವಶಕ್ಕೆ ಪಡೆಯಲು ಚಾತಕ ಪಕ್ಷಿಯಂತೆ ಕಾಯುತ್ತಿವೆ.

ಸೋದರ ಸಂಬಂಧಿ ಮೆಹುಲ್ ಚೋಸ್ಕಿ ಜೊತೆ ಗೂಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರಕ್ಕೂ ಅಧಿಕ ಕೋಟಿ ವಂಚನೆ ಮಾಡಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ಮತ್ತು ಮೆಹುಲ್ ಚೋಕ್ಸಿ ಮತ್ತೊಂದು ದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ.

ವಿಜಯ್ ಮಲ್ಯ ಬಾಕಿ:

ವಂಚಕ ನೀರವ್ ಮೋದಿ ಯನ್ನು ಭಾರತಕ್ಕೆ ಹಸ್ತಾಂತರ ವಾಗುತ್ತಿದ್ದಂತೆ ಭಾರತೀಯ ಸ್ಟೇಟ್ಸ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ವಂಚನೆ ಮಾಡಿ ಇಂಗ್ಲೆಂಡ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿ ಪಾರು ಮಾಡುವ ಅರ್ಜಿ ಇನ್ನೂ ಇಂಗ್ಲೆಂಡ್ ನ್ಯಾಯಾಲಯದಲ್ಲಿದೆ.

ನೀರವ್ ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಕಸರತ್ತು ನಡೆಸಿವೆ.