ಆರ್ಥಿಕೋತ್ಸವ: ಸಿಯುಕೆಯಲ್ಲಿ ಮೂರು ದಿನಗಳ ಆರ್ಥಿಕ ಉತ್ಸವ

ಕಲಬುರಗಿ,ಮೇ.01:”ಸುಸ್ಥಿರ ಆರ್ಥಿಕ ಅಭಿವೃದ್ಧಿ ಮಾದರಿಯು ಇಂದಿನ ಅಗತ್ಯವಾಗಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಇಂದು ಅವರು ಸಿಯುಕೆಯ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಇಕೋ ಕ್ಲಬ್ ಆಯೋಜಿಸಿದ್ದ ಮೂರು ದಿನಗಳ ಆರ್ಥಿಕೋತ್ಸವ ಮತ್ತು ಆರ್ಥಿಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ “ಇಡೀ ಪ್ರಪಂಚವು ಆರ್ಥಿಕ ಚಟುವಟಿಕೆಗಳ ಮತ್ತು ಅದರ ನೀತಿಗಳ ಸುತ್ತ ಸುತ್ತುತ್ತದೆ. ಸಮಾಜವಾದಿ ಆರ್ಥಿಕತೆಯ ಮಾದರಿ ವಿಫಲವಾಗಿದೆ, ಬಂಡವಾಳಶಾಹಿ ಆರ್ಥಿಕ ಮಾದರಿಯು ಶೋಷಣೆ ಪ್ರತಿರೂಪವಾಗಿದೆ. ಅಭಿವೃದ್ಧಿ ಮತ್ತು ಬುದ್ದಿಹೀನ ಆಧುನೀಕರಣದ ಹೆಸರಿನಲ್ಲಿ ನಾವು ನಮ್ಮ ಇಡೀ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ. ನದಿಗಳು ದೊಡ್ಡ ಚರಂಡಿ ಕಾಲುವೆಗಳಾಗಿ ಮಾರ್ಪಟ್ಟಿವೆ, ಹವಾಮಾನದಲ್ಲಿ ತುಂಬಾ ಏರುಪೇರುಗಳನ್ನು ಕಾಣುತ್ತಿದ್ದೇವೆ, ಇಡೀ ಪ್ರಾಣಿ ಸಂಕುಲವು ಅಪಾಯದಲ್ಲಿದೆ. ನಮಗೆ ಬದುಕಲು ಒಂದೇ ಭೂಮಿ ಇದೆ ಮತ್ತು ಅದನ್ನು ಮುಂದಿನ ಪೀಳಿಗೆಗೆ ಕಾಪಾಡಿ ವರ್ಗಾಯಿಸುವ ಜವಬ್ದಾರಿ ನಮ್ಮ ಮೇಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಆಧಾರಿತ ಸುಸ್ಥಿರತೆಯ ಆಧಾರದ ಮೇಲೆ ನಾವು ಆರ್ಥಿಕ ಅಭಿವೃದ್ಧಿಯ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಮ್ಮ ಆರ್ಥಿಕ ಸಮಸ್ಯೆಗೆ ಸೂಕ್ತ ಪರಿಹಾರದೊಂದಿಗೆ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ವಿಶ್ವವಿದ್ಯಾಲಯಗಳ ಸಾಮಾಜಿಕ ಜವಾಬ್ದಾರಿಯ (ಯುಎಸ್‍ಆರ್) ಕುರಿತು ಮಾತನಾಡಿದ ಅವರು, “ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಸ್ಥಳೀಯ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸೂಕ್ತ ಪರಿಹಾರಗಳನ್ನು ಒದಗಿಸಬೇಕು. ನಮ್ಮ ವಿಶ್ವವಿದ್ಯಾಲಯವು ಗ್ರಾಮೀಣ ಪ್ರದೇಶದಲ್ಲಿರುವುದರಿಂದ ನೀವು ಗ್ರಾಮೀಣ ಸಮಾಜ ಮತ್ತು ಅದರ ಆರ್ಥಿಕತೆಯ ಬಗ್ಗೆ ತಿಳಿದುಕೊಳ್ಳವುದು ಸುಲಭವಾಗಲಿದೆ. ರೈತರು, ಮಹಿಳೆಯರು, ಗ್ರಾಮೀಣ ಉದ್ಯಮಶೀಲತೆ ಮತ್ತು ಗ್ರಾಮೀಣ ಜನರ ಜೀವನೋಪಾಯಕ್ಕಾಗಿ ಸರ್ಕಾರವು ವಿವಿಧ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ನಾವು ಈ ಕಾರ್ಯಕ್ರಮಗಳ ಜಾಗೃತಿ ಮತ್ತು ಉಪಯುಕ್ತತೆಯನ್ನು ಜನರಿಗೆ ತಿಳಿಸಬೇಕಾಗಿದೆ” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ.ಬಸವರಾಜ ಪಿ ಡೋಣೂರ ಮಾತನಾಡಿ, “ಭಾರತವು ವೈವಿಧ್ಯತೆಯನ್ನು ಹೊಂದಿರುವ ಅತ್ಯಂತ ವಿಶಿಷ್ಟವಾದ ದೇಶವಾಗಿದೆ. ವೈವಿಧ್ಯತೆಯು ನಮ್ಮ ರಾಷ್ಟ್ರವನ್ನು ಏಕೀಕರಣಗೊಳಿಸಬೇಕೇ ವಿನಃ, ವಿಭಜಿಸಬಾರದು. ನಾವು ಎಲ್ಲೇ ನೆಲೆಸಿದ್ದರೂ ನಮ್ಮ ಸಂಸ್ಕøತಿಯೊಂದಿಗೆ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು. ಸಿಯುಕೆ ಭಾμÉ, ಸಂಸ್ಕೃತಿ, ಸಂಪ್ರದಾಯಗಳ ವಿಷಯದಲ್ಲಿ ಸಾಕಷ್ಟು ವೈವಿಧ್ಯತೆಯನ್ನು ಹೊಂದಿರುವ ಸಣ್ಣ ಭಾರತವಾಗಿದೆ. ಇದು ಸಮಗ್ರ ಸಿಯುಕೆ ಸಂಸ್ಕೃತಿಯನ್ನು ನಿರ್ಮಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥೆ ಪೆÇ್ರ.ಪುμÁ್ಪ ಸವದತ್ತಿ ಮಾತನಾಡಿ, “ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ನಮ್ಮ ವಿಭಾಗದ ವಿದ್ಯಾರ್ಥಿಗಳೇ ಯೋಚಿಸಿ ಆಯೋಜಿಸಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ನಮ್ಮ ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುತ್ತವೆ. ಈ ಮೂರು ದಿನಗಳಲ್ಲಿ ಆರ್ಥಿಕತೆ, ಬಜೆಟ್, ಆರ್ಥಿಕ ನೀತಿ ನಿರೂಪಣೆ, ಸುಸ್ಥಿರತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರನೇ ದಿನ ನಾವು ಜಿ20 ಥೀಮ್, ವಸುದೈವ ಕುಟುಂಬಕಂ, ಅಂದರೆ, ಒಂದು ಜಗತ್ತು, ಒಂದು ಕುಟುಂಬ ಮತ್ತು ಒಂದು ಭವಿಷ್ಯದಲ್ಲಿ ಒಂದು ದಿನದ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಒಇ ಡಾ.ಕೋಟ ಸಾಯಿಕೃಷ್ಣ, ಡಾ.ಲಿಂಗಮೂರ್ತಿ, ಡಾ.ಬಸವರಾಜ, ಡಾ.ಸುಮಾ, ಇತರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.