ಆರ್ಥಿಕವಾಗಿ ಸಹಕರಿಸಿದರೆ ಸ್ಮಶಾನ ಆಭಿವೃದ್ಧಿ ಸಾಧ್ಯ


ಗುಳೇದಗುಡ್ಡ,ಎ.21-:ಸಾರ್ವಜನಿಕ ಸ್ಮಶಾನದ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಆರ್ಥಿಕವಾಗಿ ಸಹಕರಿಸಿದರೆ ಮಾತ್ರ ಸ್ಮಶಾನ ಸರ್ವತೋಮುಖ ಅಬಿವೃದ್ದಿ ಹೊಂದಲು ಸಾಧ್ಯವಾಗಲಿದೆ ಎಂದು ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಬರಗುಂಡಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬಸವೇಶ್ವರ ನಗರದ ಸಾರ್ವಜನಿಕ ಮುಕ್ತಿದಾಮದಲ್ಲಿ ಸಾರ್ವಜನಿಕ ಮುಕ್ತಿದಾಮ ಅಭಿವೃದ್ಧಿ ಸಮಿತಿ ಹಾಗೂ ಪುರಸಭೆ ಅನುದಾನದಲ್ಲಿ ನಿರ್ಮಿಸಿದ ದಹನ ಕಟ್ಟೆಯ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಮಾತನಾಡಿ. ಸಾರ್ವಜನಿಕ ಮುಕ್ತಿದಾಮದಲ್ಲಿ ಪುರಸಭೆ ಅನುದಾನ ರೂ.5 ಲಕ್ಷ ವೆಚ್ಚದಲ್ಲಿ ದಹನ ಕಟ್ಟೆ, ಪೇವರ್ ಜೋಡನೆ ಕಾಮಗಾರಿ ಮಾಡಲಾಗಿದೆ. ದರ್ಮಸ್ಥಳ ಸಂಘದಿಂದ ಮತ್ತು ಸಾರ್ವಜನಿಕರ ದೇಣಿಗೆಯಿಂದ ಕೂಡಿದ ರೂ. 3 ಲಕ್ಷ ವೆಚ್ಚದಲ್ಲಿ ಶವ ಸಂಸ್ಕಾರ ಮಾಡುವ ಎರಡು ಯಂತ್ರಗಳನ್ನು ಕೊಡಿಸಿದ್ದಾರೆ. ಈ ಯಂತ್ರಗಳು ಶವ ಸಂಸ್ಕಾರ ಮಾಡಲು ಅನುಕೂಲವಾಗಿಲಿದೆ. ಅವುಗಳನ್ನು ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು ಎಂದು ಹೇಳಿದರು.
ಗುರುಸಿದ್ದೇಶ್ವರ ಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಶಿಲ್ಪಾ ನಾಗರಾಜ ಹಳ್ಳಿ, ಮುಕ್ತಿ ದಾಮ ಸಮಿತಿ ಅಧ್ಯಕ್ಷ ವಿಷ್ಣು ಬಳಿಗೇರ, ಪರಶುರಾಮ ಪವಾರ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಗೌಡರ, ವೈ.ಆರ್. ಹೆಬ್ಬಳ್ಳಿ, ಮುಬಾರಕ ಮಂಗಳೂರ, ಆರ್.ಎನ್. ಕಾಟವಾ, ಮಹೆಶ ಭಾರತಿ, ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಸಿ. ಮಠಪತಿ ಇತರರು ಇದ್ದರು.