ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಉಚಿತ ಸಂತೋಷ ಶಿಬಿರ

ಮಾನ್ವಿ,ಏ.೧೫- ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಎಪ್ರಿಲ್ ೨೭ ರಿಂದ ಮೇ ೦೨ ರವರೆಗೆ ಪಟ್ಟಣದ ಆಯುರ್ವೇದ ಕಾಲೇಜಿನ ಆವರಣದಲ್ಲಿ ಉಚಿತ ಸಂತೋಷ ಶಿಬಿರವನ್ನು ಆಯೋಜಿಸಲಾಗಿದ್ದು ಇದರಲ್ಲಿ ತಾವುಗಳು ಉಚಿತವಾಗಿ ಭಾಗವಹಿಸುದಾಗಿದೆ.
ಈ ಸಂತೋಷದ ಶಿಬಿರದಲ್ಲಿ ಭಾಗವಹಿಸುವುದರಿಂದ ಅತ್ಯಂತ ಪರಿಣಾಮಕಾರಿ ಉಸಿರಾಟದ ಪ್ರಕ್ರಿಯೆ ಹೇಳಿಕೊಡಲಾಗುತ್ತದೆ. ಈ ಒಂದು ಶಿಬಿರದಿಂದ ಆಂತಕ, ಉದ್ವೇಗ, ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಅರಿವು ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ರೂಪಿಸುವುದಕ್ಕೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಉತ್ತಮ ನಿದ್ದೆ, ಸಂಬಂಧಗಳ ಸೌಹಾರ್ದತೆ, ಅಂತರಿಕ ಶಕ್ತಿಯ ವೃದ್ಧಿಸುತ್ತದೆ ಎಂದು ಸಂಸ್ಥೆಯ ಸದಸ್ಯ ಗುಂಡುರಾವ್ ನೀರಮಾನವಿ ಹೇಳಿದರು ಹೆಚ್ಚಿನ ಮಾಹಿತಿಗಾಗಿ ೯೭೩೯೬೫೪೧೦೪ ಸಂಪರ್ಕ ಮಾಡಬಹುದಾಗಿದೆ ಎಂದರು.