ಆರ್ಟ್ ಆಫ್ ಲಿವಿಂಗ್ : ಕೈದಿಗಳಿಗೆ ಯೋಗ ತರಬೇತಿ ಶಿಬಿರ

ರಾಯಚೂರು.ಡಿ.೦೨-ದೇವದುರ್ಗ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ವಿಚಾರಣೆ ಕೈದಿಗಳಿಗಾಗಿ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.
ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಯಚೂರು ಜಿಲ್ಲೆಯ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎ.ರಂಗಣ್ಣ ಪಾಟೀಲ್ ಮಾತನಾಡಿ, ಮಾನವನ ಮನಸ್ಸಿಗೆ ಯೋಗ ಧ್ಯಾನ ಬದುಕಿಗೆ ಅವಶ್ಯಕತೆವಾಗಿದ್ದು, ಮಾನವನ ಮನಸ್ಸಿನ ಚಂಚಲತೆಯನ್ನು ಒತ್ತಡಗಳನ್ನು ನಿರ್ಮೂಲ ಮಾಡುವುದಕ್ಕೆ ನಮ್ಮ ಪತಂಜಲಿ ಯೋಗ ವಿವಿಧ ಅನುಕರಣೆಗಳು ಅಗತ್ಯವಾಗಿದ್ದು, ಕಾರ್ಯಕ್ರಮವು ಹೆಚ್ಚು ಆಯೋಜಿಸುವುದು ಅರ್ಥಪೂರ್ಣವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ದಂಡಾಧಿಕಾರಿಗಳಾದ ಶ್ರೀನಿವಾಸ್ ಚಾಪಲ್ ಮಾತನಾಡಿ. ಮನುಷ್ಯನಿಗೆ ತಾಳ್ಮೆ ಮತ್ತು ಶಾಂತಿಯುತವಾದ ಜೀವನಕ್ಕೆ ಯೋಗ ಶಿಬಿರಗಳು ಅಗತ್ಯವಿದೆ ಹೇಳಿದರು. ಡಿಸೆಂಬರ್ ೧ ಆಗಿರುವುದರಿಂದ ವಿಚಾರಣಾ ಕೈದಿಗಳಿಗೆ ವಿಶ್ವ ಏಡ್ಸ್ ದಿನಾಚರಣೆ ಅರಿವು ಮೂಡಿಸುತಾ, ರಾಜೇಶ್ ದೇಶ್ಪಾಂಡೆ ಮಾತನಾಡಿದರು. ಏಡ್ಸ್ ರೋಗವು ಸಾಮಾನ್ಯ ಕಾಯಿಲೆಯಾಗಿದ್ದು ಇದರ ಬಗ್ಗೆ ಯಾರು ಭಯಪಡುವ ಅಗತ್ಯವಿಲ್ಲ ಏಡ್ಸ್ ರೋಗಿಗಳನ್ನು ಗೌರವದಿಂದ ಕಾಣುವುದು ಸಮಾಜದ ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಯೋಗ ಆಯೋಜಕರಾದ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವಿಜಯಲಕ್ಷ್ಮಿ ಅಕ್ಕ ಕಾರಾಗೃಹದ ಅಧಿಕಾರಿಯಾದ ಅನಿಲ್ ಕುಮಾರ್ ಅಜ್ಜ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳ ಸಮಿತಿಯ ಸದಸ್ಯರಾದ ಬಸವರಾಜ್ ಬ್ಯಾಗವಾಟ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಚ್.ಶಿವರಾಜ್, ಕಾರಾಗೃಹದ ಸಿಬ್ಬಂದಿಗಳಾದ ವೀರಪ್ಪ ನಾಯಕ್, ಸಿದ್ದಪ್ಪ, ಭೀಮ ರಾಯ, ನಾಗೇಶ್, ಶಿವಾನಂದ್, ಗಂಗಮ್ಮ, ಗೀತಾ ಸೇರಿದಂತೆ ಸಂಘ-ಸಂಸ್ಥೆಗಳ ಮುಖಂಡರು ಸ್ಥಳೀಯರು ಸರಳವಾಗಿ ನಡೆದ ಯೋಗ ಶಿಬಿರವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.