ಆರ್ಟಿಕಲ್ ೩೭೦ ಯಶಸ್ಸಿಗೆ ಯಾಮಿನಿ ಸಂತಸ

ಬೆಂಗಳೂರು.ಏ.೩೦- ಆರ್ಟಿಕಲ್ ೩೭೦ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ನಟಿ ಯಾಮಿನಿ ಸಂತಸಗೊಂಡಿದ್ದಾರೆ. ಈ ಖುಷಿಯ ಜತೆಗೆ
ಏ,೧೯ರಿಂದ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ.
ಚುನಾವಣೆಯನ್ನು ಮುಂದಿಟ್ಟುಕೊಂಡು ಆತುರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಸಿನಿಮಾವನ್ನು ಎಲ್ಲರು ಇಷ್ಟಪಟ್ಟಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಕುಟುಂಬ ಸಮೇತ ಸಿನಿಮಾ ನೋಡಿದ್ದರು.
ನಂತರ ಎಕ್ಸ್‌ನಲ್ಲಿ, ಸಿನಿಮಾ ನೋಡಿ ಭಾವುಕರಾಗಿರುವುದಾಗಿ ತಿಳಿಸಿದ್ದಾರೆ.ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ಧತಿ ಬಗ್ಗೆ ಮನಮುಟ್ಟುವಂತೆ ಹೇಳಿದ್ದೀರಿ, ಇದು ನೈಜ ಘಟನೆಗಳ ಪ್ರೇರಣೆಯಿಂದ ಆಗಿರುವ ಸಿನಿಮಾ ಎಂದು ಬರೆದುಕೊಂಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ವಿಶೇಷ ಅಧಿಕಾರವನ್ನು ಯಾಕೆ ತೆಗೆಯಲಾಯಿತೆಂದು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಹೇಳಿದ್ದರು.
ಈ ಸಿನಿಮಾದ ನಾಯಕಿ ಯಾಮಿನಿ ಗೌತಮ್ ಪ್ರಧಾನಿಗೆ ಧನ್ಯವಾಗಳನ್ನು ಹೇಳಿದ್ದರು.
ಈ ನೈಜ ಘಟನೆಯನ್ನು ಆಧಾರಿಸಿ ಸಿನಿಮಾ ಮಾಡಿ ನಿಮಗೆ ಇಷ್ಟವಾಗುವಂತೆ ನಾನು ಮತ್ತು ನನ್ನ ತಂಡ ಮಾಡಿದ್ದೇವೆ ಎಂದು ಯಾಮಿನಿ
ಹೇಳಿದ್ದಾರೆ.
ನಟಿಯರಾದ ಪ್ರಿಯಾಮಣಿ ಮತ್ತು ಯಾಮಿನಿ ಗೌತಮ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಯಾಮಿನಿ ಗೌತಮ್ ಎನ್‌ಐಎ ಅಧಿಕಾರಿಯಾಗಿ
ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪಾತ್ರಗಳು ಮೂಡಿ ಬಂದಿವೆ.