ಆರ್ಚಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕೋಲಾರ,ಡಿ,೨೨- ರಾಜ್ಯದ ಅರ್ಚಕರ ಹಾಗೂ ದೇವಾಲಯಗಳಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.೭ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರು ಟೌನ್ ಹಾಲ್‌ನ ಸಮೀಪ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ,ಅಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಸ್.ಎನ್. ದೀಕ್ಷಿತ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ,ಆಗಮಿಕರ ಸಂಘದ ಸಹಭಾಗಿತ್ವದೊಂದಿಗೆ ಈ ಸಮಾವೇಶವನ್ನು ಘಂಟಾನಾದ ಶೀರ್ಘಿಕೆ ಭಾಗ ೨ ಹೆಸರಿನಲ್ಲಿ ಆಯೋಜಿಸಿದೆ. ಸಮಾವೇಶದಲ್ಲಿ ಮುಖ್ಯ ಮಂತ್ರಿಗಳು ಸೇರಿದಂತೆ ಸಚಿವ ಸಂಪುಟವು ಭಾಗವಹಿಸಲಿದೆ. ಕಳೆದ ೫೦ ವರ್ಷಗಳಿಂದ ಒಕ್ಕೂಟವು ಸರ್ಕಾರದೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ. ರಾಜ್ಯದಲ್ಲಿ ಅರ್ಚಕರ,ಅಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಹೋರಾಟಗಳನ್ನು ಮುಂದುವರೆಸಿ ಕೊಂಡು ಬರುತ್ತಿರುವ ಹಿಂದು ಧಾರ್ಮಿಕ ಧರ್ಮ ಸರ್ವ ಸಮಾಜದ ದೇವಾಲಯಗಳ ನೌಕರರನ್ನು ಹೊಂದಿರುವ ಸಂಸ್ಥೆಯಾಗಿದ್ದು ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು,
ರಾಜ್ಯದಲ್ಲಿ ಸುಮಾರು ೩೮,೫೦೦ ದೇವಾಲಯಗಳನ್ನು ಹೊಂದಿದೆ. ಈ ಪೈಕಿ “ಎ” ವರ್ಗದ ದೇವಾಲಯ ೨೦೫, “ಬಿ” ವರ್ಗದ ದೇವಾಲಯ ೧೯೩ ಹಾಗೂ “ಸಿ” ವರ್ಗದ ದೇವಾಲಯಗಳು ೩೬,೨೧೭ ಇದೆ. ಜಿಲ್ಲಾ ಮಟ್ಟದಲ್ಲಿ ಒಟ್ಟು ೧೩೩೭ ದೇವಾಲಯಗಳಿದೆ.ರಾಜ್ಯದಲ್ಲಿ ಸುಮಾರು ೨ ಲಕ್ಷ ಮಂದಿ ದೇವಾಲಯದ ಅರ್ಚಕರು ಇದ್ದಾರೆ ಎಂದು ತಿಳಿಸಿದರು,
ಈ ಹಿಂದೆ ಅರ್ಚಕರಿಗೆ ಸಾವಿರಾರು ಎಕರೆ ಜಮೀನುಗಳನ್ನು ನೀಡಲಾಗಿತ್ತು ಅದರೆ ಸರ್ಕಾರವು ಅದನ್ನು ಎಲ್ಲವೂ ವಾಪಾಸ್ ಪಡೆದಿದೆ. ತಿಂಗಳಿಗೆ ೫ ಸಾವಿರ ರೂ ಗೌರವ ಧನವಾಗಿ ನೀಡುತ್ತಿದೆ.ಉಳಿದಂತೆ ಮಂಗಳಾರತಿ ತಟ್ಟೆಯ ಹಣದಿಂದ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರವು ನೀಡುತ್ತಿರುವ ಗೌರವ ಧನವನ್ನು ಕನಿಷ್ಠ ೧೦ ಸಾವಿರಕ್ಕೆ ಏರಿಕೆ ಮಾಡ ಬೇಕು, ೬೦ ವರ್ಷದ ನಂತರ ನಿವೃತ್ತಿ ನಿಯಮವನ್ನು ರದ್ದು ಪಡೆಸ ಬೇಕು, ಅರ್ಚಕರ ಕುಟುಂಬಕ್ಕೆ ಹಾಗೂ ದೇವಾಲಯದ ಪೂಜೆಗೆ ಒಂದು ಸೀಮೆ ಹಸುವನ್ನು ನೀಡ ಬೇಕು ಇದರಿಂದ ಹೈನುಗಾರಿಕೆಗೆ ಒತ್ತು ನೀಡಿದಂತಾಗುವುದು ಎಂದರು.
ದೇವಾಲಯಗಳ ನಿರ್ವಾಹಣ ಟ್ರಸ್ಟ್‌ಗಳನ್ನು ರದ್ದು ಪಡೆಸಿ ಸರ್ಕಾರವೇ ವಹಿಸಿ ಕೊಳ್ಳ ಬೇಕು, ಸರ್ಕಾರದ ಹಾಗೂ ಅರ್ಚಕರ ನಿಯಂತ್ರಣದಲ್ಲಿ ದೇವಾಲಯಗಳಿರ ಬೇಕು. ಇ ಹುಂಡಿಗಳನ್ನು ತೆಗೆಯ ಬೇಕು, ದೇವಾಲಯಗಳಲ್ಲಿ ಮೊಬೈಲ್ ನಿಷೇಧಿಸ ಬೇಕು, ದೇವಾಲಯದ ಪೂಜಾ ಕಾರ್ಯಗಳಿಗೆ ಶಾಶ್ವತವಾದ ನಿಧಿ ಹಾಗೂ ಅದಾಯಗಳನ್ನು ಕಲ್ಪಿಸ ಬೇಕು, ದೇವಾಲಯ ವ್ಯಾಪ್ತಿಗೆ ಸೇರಿರುವ ಕಟ್ಟಡಗಳ ಬಾಡಿಗೆಯು ಓಬಿರಾಯನ ಕಾಲದಲ್ಲಿ ನೀಡಿದಂತೆ ರೂ ೧೦೦ ,ರೂ ೨೦೦ ಇರುವುದನ್ನು ರದ್ದು ಪಡೆಸಿ ಮಾರುಕಟ್ಟೆ ದರದ ಪ್ರಕಾರ ನೀಡುವಂತಾಗ ಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದೆ ಎಂದು ವಿವರಿಸಿದರು,
ಪ್ರಶ್ನೆಯೊಂದಕ್ಕೆ ಜಿಲ್ಲೆಯಲ್ಲಿ ಬೆರಳಿಕೆಯಷ್ಟು ಮಾತ್ರ ಎ ವರ್ಗಕ್ಕೆ ಸೇರಿದ ದೇವಾಲಯ ಇದೆ ಉದಾಹರಣೆಗೆ ಸೀತಿ ದೇವಾಲಯ, ಚಿಕ್ಕತಿರುಪತಿ ದೇವಾಲಯಗಳು, ಉಳಿದಂತೆ ಬಹುತೇಕ ಸಿ ವರ್ಗದ ದೇವಾಲಯಗಳು ಹೆಚ್ಚಾಗಿರುವುದು, ಮಠಗಳು ದೇವಾಲಯಗಳನ್ನು ತಮ್ಮ ನಿಯಂತ್ರಣಕ್ಕೆ ನೀಡಲು ಕೇಳುತ್ತಿದೆ. ರಾಜ್ಯದಲ್ಲಿ ಸುಮಾರು ೧೮ ಸಾವಿರಕ್ಕೂ ಹೆಚ್ಚು ಮಠಗಳನ್ನು ಹೊಂದಿದೆ ಎಂದರು,
ನಮ್ಮ ಒಕ್ಕೂಟವು ಮೊದಲಿಂದಲೂ ಸರ್ಕಾರದೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ. ಒಕ್ಕೂಟದ ಅಧ್ಯಕ್ಷರಾಗಿ ಸಚಿವ ದಿನೇಶ್ ಗುಂಡುರಾವ್ ನೇತ್ರತ್ವದಲ್ಲಿ ಕಳೆದ ೨೦೧೭ರ ಜನವರಿಯಂದು ನಡೆದ ಘಂಟನಾದ ಶೀರ್ಷಿಕೆ ಭಾಗ ೧ ಹೆಸರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು, ತಸ್ತೀಕ್ ಹೆಚ್ಚಳ ಹಾಗೂ ಹಲವಾರು ಬೇಡಿಕೆಗಳನ್ನು ಈಡೇರಿಸಿದ ಕೀರ್ತಿ ಒಕ್ಕೂಟಕ್ಕೆ ಸಂದಿದೆ ಎಂದರು.
ಪ್ರಶ್ನೆಯೊಂದಕ್ಕೆ ಬಿ ಮತ್ತು ಸಿ ವರ್ಗದ ಅಗಮಿಕರ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ೨ ಲಕ್ಷ ರೂವರೆಗೆ ಸೌಲಭ್ಯ ಕಲ್ಪಿಸಿದೆ. ಕಾಶಿ, ತಿರುಪತಿ ಸೇರಿದಂತೆ ಖ್ಯಾತ ಧಾರ್ಮಿಕ ಕೇಂದ್ರಕ್ಕೆ ಉಚಿತ ಪ್ರವಾಸ ಸೌಲಭ್ಯವನ್ನು ಕಲ್ಪಿಸಿದೆ. ಮಾಸಿಕವಾಗಿ ಗೌರವ ಧನವನ್ನು ೫ ಸಾವಿರ ರೂ ಮಂಜೂರು ಮಾಡಿತು ಎಂದು ವಿವರಿಸಿದರು,
ನಮ್ಮಲ್ಲಿ ಜಾತಿ ಬೇದಗಳಿಲ್ಲದೆ ೧೨೦ ಮುಸ್ಲಿಂ ದರ್ಗದ ಹಜರಾತ್‌ಗಳಿಗೂ ಸಹ ಅಗಮಿಕರಿಗೆ ನೀಡುವಂತೆ ಗೌರವಧನವನ್ನು ನೀಡಲಾಗುತ್ತಿದೆ. ದೇವರು ಮತ್ತು ದೇವಾಲಯಗಳು ಧರ್ಮಗಳ ಬೆಳವಣಿಗೆಗೆ ಪೂರಕವಾಗಿರುವುದು ಧರ್ಮಗಳಿಂದ ಸಂಸ್ಕೃತಿ ಮತ್ತು ಸಂಸ್ಕಾರಗಳು ಬೆಳೆಯುತ್ತದೆ. ಧರ್ಮಗಳ ಬೆಳವಣಿಗೆಯಲ್ಲಿ ಅಗಮಿಕರ,ಅರ್ಚಕರ ಪಾತ್ರವು ಪ್ರಧಾನವಾಗಿದ್ದು ಸಮಾಜದಲ್ಲಿ ಗೌರವಕ್ಕೆ ಪಾತ್ರವಾಗಿದೆ. ಎಂದು ಪ್ರತಿಪಾದಿಸಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಚಕ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು,
ಒಕ್ಕೂಟದ ಸಹ ಕಾರ್ಯದರ್ಶಿಗಳಾದ ಟಿ.ಕೆ.ಶಾಮಸುಂದರ್ ದೀಕ್ಷಿತ್,ಕೆ.ಎಸ್. ಉಮೇಶ್ ಶರ್ಮ, ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ದೀಕ್ಷಿತ್, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್ ದೀಕ್ಷಿತ್, ವಿನಯ್ ದೀಕ್ಷಿತ್, ಗೋಪಾಲಸ್ವಾಮಿ, ನಟರಾಜ್ ಉಪಸ್ಥಿತರಿದ್ದರು,