ಆರ್ಚಕರ ಮತ್ತು ಆಗಮಿಕರ ಸಂಘದಿಂದ ಆಹಾರ ವಿತರಣೆ

????????????????????????????????????

ಸಿರುಗುಪ್ಪ ಜೂ 10 : ನಗರದ ಸರ್ಕಾರಿ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿನ ಒಳರೋಗಿಗಳ ಸಹಾಯಕರಿಗೆ ಹಿಂದೂ ಧಾರ್ಮಿಕ ದತ್ತಿ ದೇವಾಲಯಗಳ ಆರ್ಚಕರ ಮತ್ತು ಆಗಮಿಕರ ಸಂಘದ ತಾಲೂಕು ಘಟಕದ ವತಿಯಿಂದ 500ಕ್ಕೂ ಹೆಚ್ಚು ಮಧ್ಯಾಹ್ನದ ಆಹಾರ ಪಾಕೇಟ್‍ಗಳನ್ನು ತಾಲೂಕು ಅಧ್ಯಕ್ಷ ಎನ್.ಕೆ.ತಿರುಮಲಸ್ವಾಮಿ ವಿತರಿಸಿದರು.
ನಂತರ ಮಾತನಾಡಿ ಕೋವಿಡ್-19 ಎರಡನೇ ಅಲೆಯಿಂದಾಗಿ ಸರ್ಕಾರವು ಕಠಿಣ ಲಾಕ್ ಡೌನ್ ವಿಧಿಸಿದ್ದರಿಂದ ಹೋಟಲ್‍ಗಳು, ಖಾನವಳಿಗಳು, ಮುಚ್ಚಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ, ಪರೀಕ್ಷೆಗೆ ಬಂದು ದಾಖಲಾದ ಒಳರೋಗಿಗಳ ಸಹಾಯಕರಿಗೆ ಆಹಾರ ಮತ್ತು ನೀರಿನ ಪಾಕೇಟ್‍ಗಳನ್ನು ವಿತರಿಸಲಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಮಾಧವಯ್ಯ ಸ್ವಾಮಿ, ಕಾರ್ಯದರ್ಶಿ ಎಂ.ವಿಶ್ವನಾಥ ಸ್ವಾಮಿ, ಸದಸ್ಯರಾದ ಸಿದ್ದೇಶ ಸ್ವಾಮಿ, ಶ್ಯಾಮಚಾರಿ ಇದ್ದರು.