ಆರ್ಚಕರಿಗೆ ಆಹಾರ ಕಿಟ್ ವಿತರಣೆ

????????????????????????????????????

ಸಿರುಗುಪ್ಪ ಜೂ 09 : ನಗರದ ತಾಲೂಕು ಕಛೇರಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ತಾಲೂಕಿನ 150 ದೇವಸ್ಥಾನಗಳ ಆರ್ಚಕರಿಗೆ ಆಹಾರ ಕಿಟ್‍ಗಳನ್ನು ತಹಶಿಲ್ದಾರ್ ಸತೀಶ್.ಬಿ.ಕೂಡಲಗಿಯವರು ವಿತರಿಸಿದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶರಾವ್ ಮಾತನಾಡಿ ಕೋವಿಡ್-19ನ ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯಸರ್ಕಾರವು ಕಠಿಣ ಲಾಕ್‍ಡೌನ್ ವಿಧಿಸಿದ್ದರಿಂದ ಎಲ್ಲಾ ದೇವಸ್ಥಾನಗಳು ಮುಚ್ಚಲಾಗಿದೆ ಆದ್ದರಿಂದ ದೇವಸ್ಥಾನಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಆರ್ಚಕ ಕುಟುಂಬಗಳಿಗೆ ಜೀವನ ಸಾಗಿಸುವುದು ಕಷ್ಟಕರವಾಗಿರುವುದನ್ನು ಮನಗಂಡು ತಾಲೂಕಿನಲ್ಲಿ ಈ ಹಿಂದೆ ದಾಸೋಹ ನಡೆಸುತ್ತಿದ್ದ ‘ಎ’ ಮತ್ತು ‘ಬಿ’ ದೇವಸ್ಥಾನಗಳಲ್ಲಿ ಭಕ್ತರಿಂದ ಸಂಗ್ರಹವಾದ ದವಸ ದಾನ್ಯಗಳನ್ನು ‘ಸಿ’ ದರ್ಜೆಯ ದೇವಸ್ಥಾನಗಳ ಆರ್ಚಕ ಕುಟುಂಬಗಳಿಗೆ ವಿತರಿಸುವಂತೆ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಬಲಕುಂದಿ ಬನ್ನಿವiಹಾಂಕಾಳಿ ದೇವಸ್ಥಾನ ಮತ್ತು ರಾರಾವಿ ಹುತ್ತಿನ ಎಲ್ಲಮ್ಮ ದೇವಸ್ಥಾನಗಳಲ್ಲಿ ಸಂಗ್ರಹವಾಗಿದ್ದ ದವಸ ದಾನ್ಯಗಳಲ್ಲಿ ಪ್ರತಿ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಬೆಲ್ಲ, 1 ಕೆ.ಜಿ. ಗೋದಿಹಿಟ್ಟು, 1 ಲೀ ಅಡುಗೆಎಣ್ಣೆ, 1 ಕೆ.ಜಿ. ಉಪ್ಪು, ಸೇರಿ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಶಿವಪ್ಪ ಸುಬೇದಾರ್, ಶಿರಸ್ಥೆದಾರ ಎನ್.ಬಾಬು, ಬಲಕುಂದಿ ಬನ್ನಿವiಹಾಂಕಾಳಿ ದೇವಸ್ಥಾನದ ಕಾರ್ಯನಿರ್ವಾಹಕ ಹನುಮಂತಪ್ಪ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಿದ್ದೇಶ್ವರ, ಹಿಂದೂ ಧಾರ್ಮಿಕ ದತ್ತಿ ದೇವಾಲಯಗಳ ಆರ್ಚಕರ ಸಂಘದ ತಾಲೂಕು ಅಧ್ಯಕ್ಷ ಎನ್.ಕೆ.ತಿರುಮಲಸ್ವಾಮಿ, ಸದಸ್ಯರಾದ ಎನ್.ರಾಮಮೂರ್ತಿ, ವೀರೇಶ್ ಸ್ವಾಮಿ, ಸೇರಿದಂತೆ ಇನ್ನಿತರರು ಇದ್ದರು.