ಆರ್ಚಕರಿಗೆ ಆಹಾರ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ :ಜೂ.11 ಪಟ್ಟಣದ ತಾಲೂಕು ಕಚೇರಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ತಾಲೂಕಿನ 133 ದೇವಸ್ಥಾನಗಳ ಆರ್ಚಕರಿಗೆ ಆಹಾರ ಕಿಟ್‍ಗಳನ್ನು ಶಾಸಕ ಎಸ್.ಭೀಮನಾಯ್ಕ ವಿತರಿಸಿದರು.
ನಂತರ ಮಾತನಾಡಿ ಮುಂದಿನ ದಿನಗಳಲ್ಲಿ ವಸತಿ ಇಲ್ಲದ ಅರ್ಚಕರಿಗೆ ಮನೆ ನಿರ್ಮಿಸಿಕೊಡಲಾಗುವುದು. ಕೋವಿಡ್-19ನ ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯಸರ್ಕಾರವು ಕಠಿಣ ಲಾಕ್‍ಡೌನ್ ವಿಧಿಸಿದ್ದರಿಂದ ಎಲ್ಲಾ ದೇವಸ್ಥಾನಗಳು ಮುಚ್ಚಲಾಗಿದೆ ಆದ್ದರಿಂದ ದೇವಸ್ಥಾನಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಆರ್ಚಕ ಕುಟುಂಬಗಳಿಗೆ ಜೀವನ ಸಾಗಿಸುವುದು ಕಷ್ಟಕರವಾಗಿರುವುದನ್ನು ಮನಗಂಡು ತಾಲೂಕಿನಲ್ಲಿ ಆರ್ಚಕ ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸಲಾಗುತ್ತಿದೆಂದು ತಿಳಿಸಿ ಕ್ಷೇತ್ರದಲ್ಲಿ ಕರೋನಾ ಸೊಂಕು ಕಡಿಮೆಯಾಗಿದ್ದರೂ ಯಾರು ಸಹಾ ಮೈ ಮರೆತು ಕೊಡುವ ಪರಿಸ್ಥಿತಿ ಇಲ್ಲ ನಕಲಿ ವೈದ್ಯರು ಬಳಿ ಯಾರು ಚಿಕಿತ್ಸೆ ಪಡೆದುಕೊಳ್ಳಬಾರದು ನಿಮಗೆ ಕರೋನ ಲಕ್ಷಣಗಳು ಕಂಡು ಬಂದಲ್ಲಿ ಧೈರ್ಯದಿಂದ ಸರ್ಕಾರಿ ಅಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಲ್ಲಿ ನಿಮಗೆ ಯಾವುದೇ ತೊಂದರೆ ಆಗದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀಮತಿ ಶರಣಮ್ಮ , ಪುರಸಭೆ ಅಧ್ಯಕ್ಷೆ ಕವಿತಾ ಹಾಲ್ದಾಳ್, ಉಪಾಧ್ಯಕ್ಷ ಹುಳ್ಳಿ ಮಂಜುನಾಥ,ಪುರಸಭೆ ಸದಸ್ಯ ಆಲ್ಲಾಭಕ್ಷಿ, ಟಿ ಹೆಚ್ ಓ ಶಿವರಾಜ್, ಸಿ.ಓ ಡಾಕ್ಟರ್ ಶಂಕರನಾಯ್ಕ ಮುಖಂಡರಾದ ಡಿಶ್ ಮಂಜುನಾಥ, ಪವಾಡಿ ಹನುಮಂತಪ್ಪ, ಬಾಲಕೃಷ್ಣ ಬಾಬು ಇತರರಿದ್ದರು.