ಆರ್ಕಿಟೆಕ್ಟ್‍ಗಳ ಹಿತ ಕಾಪಾಡುವಂತೆ ಆಗ್ರಹಿಸಿ ಮನವಿ

ವಿಜಯಪುರ,ಫೆ.25: ಆರ್ಕಿಟೆಕ್ಟ್‍ಗಳ ಹಿತ ಕಾಪಾಡುವಂತೆ ಆಗ್ರಹಿಸಿ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಕರ್ನಾಟಕ ವಿಜಯಪುರ ಶಾಖೆಯ ವಾಸ್ತುಶಿಲ್ಪಿಗಳು ಶನಿವಾರ ಸಂಜೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸರಕಾರದ ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಬಿಲ್- 2024 ನಲ್ಲಿ ವಾಸ್ತುಶಿಲ್ಪಿಗಳ ಹಿತ ಕಡೆಗಣಿಸಲಾಗಿದೆ. ಇದು ಏಕಮುಖವಾಗಿದ್ದು, ಇದರಿಂದ ಕೇವಲ ಸಿವಿಲ್ ಎಂಜಿನಿಯರ್‍ಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆದರೆ, ವೃತ್ತಿಪರತೆ ಮತ್ತು ನೈಪುಣ್ಯತೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಿರುವ ಮತ್ತು ಅನುಭವ ಹೊಂದಿರುವ ವಾಸ್ತುಶಿಲ್ಪಿಗಳಿಗೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಿಲ್‍ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಸಮಾಜ ವಾಸ್ತುಶಿಲ್ಪಿಗಳ ನೈಪುಣ್ಯತೆ ಮತ್ತು ಜ್ಞಾನದಿಂದ ವಂಚಿತವಾಗುತ್ತದೆ. ಕೇಂದ್ರ ಕಾನೂನಿನಲ್ಲಿ ವೃತ್ತಿನಿರತ ವಾಸ್ತುಶಿಲ್ಪಿಗಳು, ನಗರ ಯೋಜನೆಕಾರರು ಹಾಗೂ ಇನ್ನಿತರರ ಹಿತ ಕಾಪಾಡುವ ಅಂಶಗಳಿವೆ. ರಾಜ್ಯದಲ್ಲಿಯೂ ಇದೇ ಮಾದರಿಯ ಬಿಲ್ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.
ವಾಸ್ತುಶಿಲ್ಪಿಗಳ ಮನವಿಗೆ ಸ್ಪಂದಿಸಿದ ಸಚಿವ ಎಂ. ಬಿ. ಪಾಟೀಲ ಅವರು, ಲÉೂೀಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ ಅವರಿಗೆ ಕರೆ ಮಾಡಿ, ಫೆ. 26 ರಂದು ಸೋಮವಾರ ಆರ್ಕಿಟೆಕ್ಟ್ ಎಂಜಿನಿಯರ್‍ಗಳು ಬೆಂಗಳೂರಿಗೆ ಆಗಮಿಸಲಿದ್ದು, ಅವರ ಅಹವಾಲು ಆಲಿಸಿ ಸ್ಪಂದಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ವಿಜಯಪುರ ಶಾಖೆಯ ಅಧ್ಯಕ್ಷ ಜೇಶಕಟ್ಟಿ, ಖಜಾಂಚಿ ವಿನೋದ ಶಿರÀಹಟ್ಟಿ, ಕಾರ್ಯದರ್ಶಿ ಗಂಗಾ ರೆಡ್ಡಿ, ಆಡಳಿತ ಮಂಡಳಿ ಸದಸ್ಯÀ ಮನೀಶ ದೇವಗಿರಕರ, ಮಂಜುನಾಥ ಶಿಂಗೆ, ವಿಠ್ಠಲ ಟಂಕಸಾಲಿ, ಶ್ರೀಲಕ್ಷ್ಮಿ ಕೌತಾಳ, ಸತೀಶ ದೇಶಮುಖ, ಆನಂದ ಕುಸೂರ, ಪೃಥ್ವಿರಾಜ ಕೊಕರೆ, ರೋಹನ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.