ಆರ್‌ಎಸ್‌ಸ್ ಫ್ಯಾಸಿಸ್ಟ್ ಸಂಘಟನೆ: ರಾಗಾ ಆರೋಪ

ಲಂಡನ್, ಮಾ. ೭- ರಾಷ್ಟ್ರೀಯ ಸ್ವಯಂಸೇವಕ ಸಂಘ -ಆರ್‌ಎಸ್‌ಎಸ್ “ಮೂಲಭೂತವಾದಿ ” ಮತ್ತು “ಫ್ಯಾಸಿಸ್ಟ್” ಸಂಘಟನೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದಕ್ಕೆ ಆರ್ ಎಸ್ ಎಸ್, ಬಿಜೆಪಿ ಕಾರಣ.ಈ ಸಂಘಟನೆಗಳು ಭಾರತದ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಲಂಡನ್‌ನ ಚಥಮ್ ಹೌಸ್‌ನಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತದಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಇನ್ನು ಶೋಷಣೆಗೆ ಒಳಗಾಗಿದ್ದಾರೆ.ಭಾರತೀಯ ಪ್ರಜಾಪ್ರಭುತ್ವದಲ್ಲಿ ಗಂಭೀರ ಸಮಸ್ಯೆಗೆ ಸಿಲುಕಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಪತ್ರಿಕಾ, ನ್ಯಾಯಾಂಗ, ಸಂಸತ್ತು ಮತ್ತು ಚುನಾವಣೆ. ಆಯೋಗ ಸೇರಿದಂತೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿವೆ. ಈ ಸಂಸ್ಥೆಗಳು ಒಂದಲ್ಲ ಒಂದು ರೀತಿ ಬೆದರಿಕೆಯಲ್ಲಿವೆ ಮತ್ತು ನಿಯಂತ್ರಣ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಪ್ರತಿಪಕ್ಷದ ನಾಯಕನನ್ನು ಕೇಳಬಹುದು. ನನ್ನ ಫೋನ್‌ನಲ್ಲಿ ಪೆಗಾಸಸ್ ಇತ್ತು, ನಾವು ಅಧಿಕಾರದಲ್ಲಿದ್ದಾಗ ಇದು ಸಂಭವಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಕೇಂದ್ರದ ಮೇಲೆ ಕಟುವಾದ ದಾಳಿ ನಡೆಸಿದ್ದರು. ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ಬಿಚ್ಚಿಟ್ಟಿದ್ದಾರೆ ಮತ್ತು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬೇಹುಗಾರಿಕೆ ನಡೆಸಲು ಪ್ರಯತ್ನ ಮಾಡಲಾಗಿದೆ ಎಂದು ದೂರಿದ್ದಾರೆ.
ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳ ಫೋನ್‌ಗಳಲ್ಲಿ ಪೆಗಾಸಸ್ ಇತ್ತು. ಗುಪ್ತಚರ ಅಧಿಕಾರಿಗಳು ಕರೆ ಮಾಡಿ ’ದಯವಿಟ್ಟು ನೀವು ಫೋನ್‌ನಲ್ಲಿ ಏನು ಹೇಳುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ ಏಕೆಂದರೆ ನಾವು ರೆಕಾರ್ಡ್ ಮಾಡುತ್ತಿದ್ದೇವೆ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದರು.
ಪ್ರತಿಪಕ್ಷಗಳ ಮೇಲಿನ ಪ್ರಕರಣಗಳು. ಯಾವುದೇ ಸಂದರ್ಭಗಳಲ್ಲಿ ಕ್ರಿಮಿನಲ್ ಹೊಣೆಗಾರಿಕೆಯ ಪ್ರಕರಣಗಳಾಗಿರಬಾರದು ಎಂಬ ವಿಷಯಗಳಿಗೆ ನಾನು ಹಲವಾರು ಕ್ರಿಮಿನಲ್ ಹೊಣೆಗಾರಿಕೆಯ ಪ್ರಕರಣಗಳನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.