ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸುಪ್ರೀಂ ಹಸಿರು ನಿಶಾನೆ

ಅರ್ಜಿ ವಜಾ
ನವದೆಹಲಿ,ಏ.೧೧- ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡುವ ಮೂಲಕ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿಥಾಲ್ ಅವರಿದ್ದ ಪೀಠ ಫೆಬ್ರವರಿ ೧೦ ರಂದು ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರದ ಮೇಲ್ಮನವಿ ವಜಾಗೊಳಿಸಿ.ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಮಿಳುನಾಡಿನಲ್ಲಿ ಜಾಥಾ ನಡೆಸಲು ಅನುವು ಮಾಡಿಕೊಟ್ಟಿದೆ.
ನಿಷೇಧಿತ ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ -ಪಿಎಫ್‌ಐ ಯಿಂದ ಮೆರವಣಿಗೆಗಳ ಮೇಲೆ ದಾಳಿಯ ಬೆದರಿಕೆಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದರೂ ಮದ್ರಾಸ್ ಹೈಕೋರ್ಟ್ ಫೆಬ್ರವರಿ ೧೦ ರಂದು ಮಾರ್ಗ ಮೆರವಣಿಗೆಗೆ ಅನುಮತಿ ನೀಡಿತ್ತು ,ಇದನ್ನು ಪ್ರಶ್ನಿಸಿದ್ದ ಸರ್ಕಾರದ ಅರ್ಜಿ ವಜಾ ಮಾಡಿದೆ.
ಆರ್‌ಎಸ್‌ಎಸ್ ತಮಿಳುನಾಡಿನಲ್ಲಿ ನಿರ್ಬಂಧಗಳಿಲ್ಲದೆ ಮರುನಿಗದಿಪಡಿಸಿದ ದಿನಾಂಕಗಳಲ್ಲಿ ತನ್ನ ಮಾರ್ಗದ ಮೆರವಣಿಗೆ ಕೈಗೊಳ್ಳಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ತೀರ್ಪು ಇದಾಗಿದೆ.
೨೦೨೨ ರ ಅಕ್ಟೋಬರ್‍ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಗಾಂಧಿ ಜಯಂತಿಯನ್ನು ಆಚರಿಸಲು ಆರೆಸ್‌ಎಸ್ ತನ್ನ ಮೆರವಣಿಗೆಯನ್ನು ರಾಜ್ಯದಲ್ಲಿ ನಡೆಸಲು ತಮಿಳುನಾಡು ಸರ್ಕಾರದ ಅನುಮತಿ ಕೋರಿತ್ತು. ರಾಜ್ಯ ಸರ್ಕಾರ ನಿರಾಕರಿಸಿದ್ದರಿಂದ ಆರೆಸ್‌ಎಸ್ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.
ಅದೇ ವರ್ಷ ನವೆಂಬರ್ ೪ ರಂದು, ಏಕ-ನ್ಯಾಯಾಧೀಶರು ಆರ್‌ಎಸ್‌ಎಸ್‌ಗೆ ಮೆರವಣಿಗೆಯನ್ನು ಒಳಾಂಗಣದಲ್ಲಿ ಅಥವಾ ಸುತ್ತುವರಿದ ಸ್ಥಳಗಳಲ್ಲಿ ನಿರ್ಬಂಧಿಸುವಂತಹ ಕೆಲವು ಷರತ್ತುಗಳಿಗೆ ಒಳಪಟ್ಟು ಮೆರವಣಿಗೆಯನ್ನು ನಡೆಸಲು ಅನುಮತಿ ನೀಡಿದ್ದರು.
ಇದಕ್ಕೂ ಮುನ್ನ, ಆರ್‌ಎಸ್‌ಎಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಆರ್ಟಿಕಲ್ ೧೯(೧)(ಬಿ) ಅಡಿಯಲ್ಲಿ ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಅತ್ಯಂತ ಬಲಿಷ್ಠ ನೆಲದ ಅನುಪಸ್ಥಿತಿಯಲ್ಲಿ ಮೊಟಕುಗೊಳಿಸಲಾಗುವುದಿಲ್ಲ ಎಂದಿದ್ದರು.
ಮಹೇಶ್ ಜೇಠ್ಮಲಾನಿ ಜೊತೆಗೆ ಗುರು ಕೃಷ್ಣ ಕುಮಾರ್ ಮತ್ತು ಮೇನಕಾ ಗುರುಸ್ವಾಮಿ ಅವರು ಆರೆಸ್‌ಎಸ್ ಪರ ವಕೀಲರಾದ ನಚಿಕೇತ ಜೋಶಿ, ಅರ್ಚನಾ ಪಾಠಕ್ ದವೆ, ಮುಗ್ಧಾ ಪಾಂಡೆ, ಸಂತೋಷ್ ಕುಮಾರ್ ಮತ್ತು ಪ್ರಣೀತ್ ಪ್ರಣವ್ ವಕೀಲರು ವಾದ ಮಂಡಿಸಿದ್ದರು.ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.