
ಕೋಲಾರ,ಆ,೧೪- ಕೊಲೆ ಪ್ರಕರಣ ದಾಖಲಾದ ೨೪ ಗಂಟೆಯ ಒಳಗೆ ಆರೋಪಿಯನ್ನು ಪತ್ತೆ ಹಚ್ಚಿ ಕೊಡುವಲ್ಲಿ ಪೊಲೀಸ್ ಶ್ವಾನ ರಕ್ಷ ಯಶಸ್ವಿಯಾಗಿ ಪೋಲಿಸ್ ಇಲಾಖೆಯ ಶ್ಲಾಘನೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದರು,
ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಆಗಸ್ಟ್ ೯ ರಂದು ಮುಳಬಾಗಿಲು ತಾಲ್ಲೂಕಿನ ನಂಗಲಿ ಪೋಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ದೇವಹಳ್ಳಿಯಲ್ಲಿ ಸುರೇಶ್ ಎಂಬಾತನು ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ದುಷ್ಕರ್ಮಿ ಮಾರಾಕಾಸ್ತ್ರದಿಂದ ಮಾಡಿದ ಹಲ್ಲೆಯಿಂದ ಸ್ಥಳದಲ್ಲೇ ಸಾವನ್ನಾಪಿದ್ದು ಆರೋಪಿಯು ತಲೆ ಮರೆಸಿ ಕೊಂಡಿದ್ದನು,
ಮಾರನೇಯ ದಿನ ದನ ಕಾಯುವ ಹುಡುಗ ಸುರೇಶ್ ಅವರನ್ನು ಎಬ್ಬಿಸಲು ಬಂದಾಗ ರಕ್ತದ ಮಡುವಿನಲ್ಲಿ ಸುರೇಶ್ ಸಾವನ್ನಪ್ಪಿರುವ ವಿಷಯವು ಬೆಳಕಿಗೆ ಬಂದಿದ್ದು ಮೃತ ಸುರೇಶ್‌ನ ಸಹೋದರ ಮಣಿಕಂಠ ಬಿನ್ ಲೇಟ್ ಚಂಗಲರಾಯಪ್ಪ ಎಂಬುವರು ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿ ಕೊಂಡು ಸ್ಥಳ ಪರಿಶೀಲನೆಗೆ ಡಿ.ಎ.ಆರ್. ಕಛೇರಿಯಲ್ಲಿ ಶ್ವಾನ ರಕ್ಷಳನ್ನು ಕರೆದು ಕೊಂಡು ಹೋದಾಗ ರಕ್ತದ ವಾಸನೆಯನ್ನು ಹಿಂಬಾಲಿಸಿ ಕೊಂಡು ಸುಮಾರು ಒಂದೂವರೆ ಕಿ.ಮಿ. ದೂರದ ಪೊದೆಯೊಂದರಲ್ಲಿ ಅವಿತಿಟ್ಟು ಕೊಂಡು ನಿದ್ರಿಸುತ್ತಿದ್ದ ಅರೋಪಿಯ ಸುಳಿವು ನೀಡಿದೆ ಎಂದರು,
ಪೊಲೀಸರು ಕೊಡಲೇ ಅರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡೆಸಿದಾಗ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಸುರೇಶ್ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದೆ ಎಂದು ತಿಳಿಸಿದ್ದಾನೆ. ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ಬಂದನಕ್ಕೆ ಒಳಪಡೆಸಲಾಗಿದೆ ಎಂದು ಹೇಳಿದರು,
ಕಳೆದ ೮ ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರು ಶ್ವಾನ ರಕ್ಷ ಅರೋಪಿಗಳ ಪತ್ತೆ ಕಾರ್ಯದಲ್ಲಿ ಇಲಾಖೆಗೆ ಸಹಕಾರ ನೀಡುತ್ತಿರುವುದರಿಂದ ಹಲವಾರು ಪ್ರಕರಣಗಳು ತ್ವರಿತವಾಗಿ ಪತ್ತೆ ಹಚ್ಚಲು ಪೂರಕವಾಗಿದೆ ಎಂದು ಶ್ಲಾಘಿಸಿ ರಕ್ಷ ಮತ್ತು ನಿರ್ವಾಹಣೆ ಮಾಡುತ್ತಿರುವ ಸಿಬ್ಬಂದಿಗೂ ಬಹುಮಾನವನ್ನು ಜಿಲ್ಲಾ ಪೊಲೀಸರ್ ವರಿಷ್ಠಾಧಿಕಾರಿಗಳು ವಿತರಿಸಿದರು,
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಮಲ್ಲೇಶ್, ಡಿ.ಎ.ಆರ್. ಸಿ.ಪಿ.ಐ. ರಘು, ಗಲ್ ಪೇಟೆ ಠಾಣೆಯ ಸಿ.ಪಿ.ಐ. ವೆಂಕಟರವಣಪ್ಪ ಉಪಸ್ಥಿತರಿದ್ದರು,