ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ : ಪಾಟೀಲ

ಕಾಳಗಿ.ಎ.20: ಹುಬ್ಬಳ್ಳಿಯಲ್ಲಿ ನಡೆದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಭೀಕರ ಕೋಲಿ ಖಂಡನೆ ಪ್ರಕರಣದ ಆರೋಪಿ ಫಯಾಜ್ ಗೆ ಕಠಿಣ ಶಿಕ್ಷೆ ವಿಧಿಸಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಂದೇಶ ರವಾನಿಸಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಹಿರಿಯ ಮುಖಂಡ ಮಲ್ಲಿನಾಥ ಪಾಟೀಲ ಕಾಳಗಿ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ದುರ್ಘಟನೆಯಿಂದಾಗಿ ವೀರಶೈವ ಲಿಂಗಾಯತ ಸಮಾಜವಷ್ಟೇ ಅಲ್ಲ. ಇಡೀ ಪ್ರಜ್ಞಾವಂತ ಸಮಾಜದ ಮಹಿಳಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಘಟನೆಯಲ್ಲಿ ಅನಗತ್ಯ ರಾಜಕಾರಣ ಬೆರೆಸದೆ ನ್ಯಾಯಸಮ್ಮತ ತನಿಖೆಯ ಮೂಲಕ ಆರೋಪಿಗೆ ಗಂಭೀರ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ವೀರಶೈವ – ಲಿಂಗಾಯತ ಸಮುದಾಯ ಬಿದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.