ಆರೋಪಿಗಳ ರಕ್ಷಣೆಗೆ ಸರ್ಕಾರ ಕಸರತ್ತು: ಶೋಭಾ ಕರಂದ್ಲಾಜೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.15:- ಯುವ ಬ್ರಿಗೇಡ್ ಯುವಕ ವೇಣುಗೋಪಾಲ್ ನನ್ನು ಬರ್ಬರವಾಗಿ ಕೊಂದು ಹಾಕಿರುವ ಆರೋಪಿಗಳನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರ್ಕಾರ ಕಸರತ್ತು ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಪಟ್ಟಣದಲ್ಲಿ ಇದೇ 9ರಂದು ಹತ್ಯೆಯಾದ ಯುವ ಬ್ರಿಗೇಡ್ ಮುಖಂಡ ವೇಣುಗೋಪಾಲ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯುಕ್ತಿಕ ಧನ ಸಹಾಯ ಮಾಡಿ ವರದಿಗಾರರ ಜೊತೆ ಅವರು ಮಾತನಾಡಿದರು.ಕೊಂದು ಹಾಕಿರುವ ಆರೋಪಿಗಳನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಸರ್ಕಾರ ಹಲವು ತಂತ್ರಗಳನ್ನು ಹೆಣೆಯುತ್ತಿದ್ದು,ಮೊದಲನೇ ಆರೋಪಿಯನ್ನು ನಾಲ್ಕನೇ ಆರೋಪಿಯಾಗಿಸಿ ನಾಲ್ಕನೇ ಆರೋಪಿಯನ್ನು ಮೊದಲ ಆರೋಪಿಯನ್ನಾಗಿ ಬದಲಾಯಿಸಲಾಗಿದೆ.ಇದು ಆರೋಪಿಗಳನ್ನು ರಕ್ಷಿಸುವ ಸರ್ಕಾರದ ಮೊದಲ ಕುತಂತ್ರ.ರಾಜ್ಯದ ಜನತೆ ವೇಣುಗೋಪಾಲ್ ಹತ್ಯೆ ಪ್ರಕರಣದಲ್ಲಿ ಸರ್ಕಾರದ ನಡೆಯನ್ನು ಗಮನಿಸುತ್ತಿದ್ದು ,ಮುಂದಿನ ದಿನಗಳಲ್ಲಿ ಸರ್ಕಾರ ಇದರ ಪ್ರತಿಫಲ ಅನುಭವಿಸಲಿದೆ.
ಜನರನ್ನು ವಿಕೃತವಾಗಿ ಕೊಲ್ಲುವುದನ್ನು ನಾವು ಹೊರದೇಶಗಳಲ್ಲಿ ಕಾಣುತ್ತಿದ್ದೆವು.ಇಂದು ನಮ್ಮ ರಾಜ್ಯಕ್ಕೆ ಬಂದಿದೆ,ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಕರ್ನಾಟಕ “ಕೊಲೆಗಡುಕ ರಾಜ್ಯ”ಎಂಬ ಕುಖ್ಯಾತಿಗೆ ಒಳಗಾಗಲಿದೆ ಎಂದರು.
ಕರ್ನಾಟಕದಲ್ಲಿ ಕಳೆದು ಎರಡು ತಿಂಗಳಲ್ಲಿ ಹಿಂದೂ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು,ಧರ್ಮದ ಕಾರಣಕ್ಕಾಗಿ ವೇಣುಗೋಪಾಲ್ ನನ್ನು ಕೊಲ್ಲಲಾಗಿದೆ.ವೈಯುಕ್ತಿಕ ದ್ವೇಷ ಯಾವುದು ಇರಲಿಲ್ಲ ಎಂದು ಗೊತ್ತಾಗಿದೆ.ಒಂದು ವರ್ಗ ನಮ್ಮನ್ನು ರಕ್ಷಣೆ ಮಾಡುವ ಸರ್ಕಾರ ಬಂದಿದೆ ಎಂದು ಉನ್ಮಾದಗೊಂಡು ಹತ್ಯೆ ನಡೆಸುತ್ತಿದೆ.ಆದರೆ, ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ.ವೇಣುಗೋಪಾಲ್ ಹತ್ಯೆಯ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು.ಯಾರೇ ಕುಮ್ಮಕ್ಕು ನೀಡಿದ್ದರೂ ನಿಷ್ಪಕ್ಷಪಾತ ತನಿಖೆಯಾಗಬೇಕು.ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು.ಬಿಜೆಪಿ ಪಕ್ಷ ವೇಣುಗೋಪಾಲ್ ಹತ್ಯೆಯ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಹೋರಾಟ ನಡೆಸುತ್ತದೆ ಎಂದರು.
ಬಿಜೆಪಿ ಪಕ್ಷ ಸಾವಿನಲ್ಲಿ ರಾಜಕೀಯ ಮಾಡುತ್ತಿಲ್ಲ.ಬದಲಾಗಿ ಹಿಂದೂ ಯುವ ಕಾರ್ಯಕರ್ತ ಹತ್ಯೆಗೆ ನ್ಯಾಯ ಕೇಳುತ್ತಿದೆ.ಅನ್ಯಾಯವಾದಾಗ ನ್ಯಾಯ ಕೇಳುವುದು ರಾಜಕೀಯ ಎಂದಾದರೆ ರಾಜ್ಯದಲ್ಲಿ ಜೀವಿಸುವುದು ಕಷ್ಟಸಾಧ್ಯ.ಪೆÇಲೀಸ್ ಇಲಾಖೆ ಯಾವುದೇ ಪ್ರಭಾವಕ್ಕೆ ಮಣಿಯದೆ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದರು.
ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಅಧ್ಯಕ್ಷ ಕೆ.ಸಿ .ಲೋಕೇಶ್ ,ಡಾ.ರೇವಣ್ಣ ,ಮೈಸೂರು ಮಹಾನಗರ ಪಾಲಿಕೆ ಸದಸ್ಯ ಎಂ.ಸತೀಶ್,ಚಾಮುಂಡೇಶ್ವರಿ ಪರಾಜಿತ ಅಭ್ಯರ್ಥಿ ಕವೀಶ್ ಗೌಡ ,ಟೌನ್ ಅಧ್ಯಕ್ಷ ಕಿರಣ್ ,ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ನಾಣಿಗೌಡ,ವರುಣಾ ಎಸ್ಟಿ ಮೋರ್ಚಾದ ಕಾರ್ಯದರ್ಶಿ ರಂಗುನಾಯಕ್ ,ಮಾಜಿ ಪುರಸಭೆ ಸದಸ್ಯ ಚಿಕ್ಕಮಹದೇವ ,ಕಿರಗಸೂರು ಮಹದೇವ ,ನಿಖಿಲ್ ,ಮು ಖಂಡರಾದ ಎಸ್.ಎಂ .ಆರ್ . ಪ್ರಕಾಶ್ ,ಕೊತ್ತೇಗಾಲ ಕಿಟ್ಟಿ ,ಮಹೇಶ್ ಮುಸುರಿ, ಮಂಟೇಲಿಂಗ ,ನಾಗರಾಜು ,ಶರಣು , ಸಿದ್ದರಾಜು, ಕಿರಗಸೂರು ಹುಣಸೂರು ಪುಟ್ಟಯ್ಯ ಇತರರು ಹಾಜರಿದ್ದರು