ಆರೋಪಿಗಳ ರಕ್ಷಣೆಗೆ ಮುಂದಾದರೆ ಉಗ್ರ ಹೋರಾಟ: ಮುತಾಲಿಕ್

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಆ.02:- ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯ ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ನಾಯಕರು ಮುಂದಾದರೆ ಶ್ರೀರಾಮಸೇನೆಯ ಲಕ್ಷಾಂತರ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಶ್ರೀರಾಂಪುರದ ಮೃತ ವೇಣುಗೋಪಾಲ್ ಮನೆಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸುದ್ಧಿಗಾರರ ಜೊತೆ ಅವರು ಮಾತನಾಡಿದರು. ವೇಣುಗೋಪಾಲ್ ಹತ್ಯೆಯ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು.ಕಾಂಗ್ರೆಸ್ ಸರ್ಕಾರ ತನಿಖೆಯಲ್ಲಿ ಮೂಗುತೂರಿಸುವ ಕೆಲಸ ಮಾಡಿದಲ್ಲಿ ಶ್ರೀರಾಮ ಸೇನೆಯ ಲಕ್ಷಾಂತರ ಹಿಂದೂ ಕಾರ್ಯಕರ್ತರು ವೇಣುಗೋಪಾಲ್ ಹತ್ಯೆಯ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಹನುಮ ಜಯಂತಿ ಮಾಡುವುದು ತಪ್ಪೇ, ನಾವೇನು ಕಾಂಗ್ರೆಸ್ ಪಕ್ಷದವರ ತರಹ ದೇಶ ವಿದ್ರೋಹಿ ಕೆಲಸ ಮಾಡುವ ವರ್ಗಕ್ಕೆ ಕುಮ್ಮಕ್ಕು ನೀಡುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು.
ಹಿಂದೂ ಕಾರ್ಯಕರ್ತನ ಹತ್ಯೆಯು ದುರುದ್ದೇಶ ಪೂರಕವಾಗಿ ನಡೆದಿದ್ದು, ವ್ಯಕ್ತಿಯೊಬ್ಬನ ಸಾಮಾಜಿಕ ಏಳಿಗೆಯನ್ನು ಸಹಿಸದೆ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರು.
ಪೆÇಲೀಸ್ ನಿಷ್ಪಕ್ಷಪಾತ ತನಿಖೆಗೆ ಮುಂದಾಗಲಿ:
ವೇಣುಗೋಪಾಲ್ ಹತ್ಯೆಯ ಪ್ರಕರಣದ ತನಿಖೆಯಲ್ಲಿ ಪೆÇಲೀಸ್ ಇಲಾಖೆಯು ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು.ಇದು ಅತ್ಯಂತ ಸೂಕ್ಷ್ಮ ಪ್ರಕರಣ ಆಗಿರುವುದರಿಂದ ಅತ್ಯಂತ ಜಾಗ್ರತೆಯಿಂದ ತನಿಖೆ ನಡೆಸಬೇಕಿದೆ. ಕಾಂಗ್ರೆಸ್ ಪಕ್ಷದ ಹಲವು ನಾಯಕರಿಂದ ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದ್ದು, ಪೆÇಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದ್ದು,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರe?ಣಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅಮರ್ ನಾಥ್,ಎಸ್. ಭಾಸ್ಕರನ್, ರಾಮಾನುಜಮ್,ಅಯ್ಯಪ್ಪ ಸಿದ್ಧಲಿಂಗಮೂರ್ತಿ, ವೇಣುಗೋಪಾಲ್ ಪತ್ನಿ ಪೂರ್ಣಿಮಾ ಇತರರು ಹಾಜರಿದ್ದರು.