ಶಹಾಬಾದ :ಅ.12:ಚಿತ್ತಾಪೂರ ಮತಕ್ಷೇತ್ರದ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯವಕ ದೇವಾನಂದ ಕೋರಬಾ ಸಾವಿಗೆ ಕಾರಣರಾಗಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ, ತಾಲೂಕ ಕೋಲಿ ಸಮಾಜದ ವತಿಯಿಂದ ಬುಧವಾರ ರಾಷ್ಟ್ರೀಯ ಹೆದ್ದಾರಿ 150ರ ವಾಡಿ ಕ್ರಾಸ್‍ನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕೋಲಿ ಸಮಾಜದ ಮುಖಂಡರು ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವ ದೇವಾನಂದ ಕೊರಬಾ ಸಾವು ಸಂಭವಿಸಿ ಮೂರು ತಿಂಗಳು ಗತಿಸಿದರೂ ಇಲ್ಲಿಯವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದರೆ ಇದು ಪೊಲೀಸರ ನಿರ್ಲಕ್ಷವೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೋಲಿ ಸಮಾಜದ ಜನರ ಮೇಲೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಶೋಷಣೆ, ದೌರ್ಜನ್ಯ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದೇವಾನಂದ ಕೋರಬಾ ಆತ್ಮಹತ್ಯೆ ಕೇಸ್‍ನ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ದೇವಾನಂದ ಕುಟುಂಬಕ್ಕೆ ಜೀವಭಯ ಹಿನ್ನಲೆ ರಕ್ಷಣೆ ನೀಡಬೇಕು. 25 ಲಕ್ಷ ರೂ. ಪರಿಹಾರ ನೀಡಬೇಕು. ದೇವಾನಂದ ಮತ್ತು ಅರ್ಚನಾ ಕೇಸ್‍ನಲ್ಲಿ ನಿರ್ಲಕ್ಷವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜಿಲ್ಲೆಯಲ್ಲಿ ಕೋಲಿ ಸಮಾಜದ ಜನರ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯ ಹೆಚ್ಚುತ್ತಿವೆ. ಕೂಡಲೇ ಕಡಿವಾಣಿ ಹಾಕಬೇಕು. ಎಂದು ಒತ್ತಾಯಿಸಿದರು. ನಂತರ ಬೇಡಿಕೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಗುರುರಾಜ ಸಂಗಾವಿ ಅವರಿಗೆ ಸಲ್ಲಿಸಲಾಯಿತು.
ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಅವ್ವಣ್ನ ಮ್ಯಾಕೇರಿ, ನಿಂಗಣ್ಣ ಹುಳಗೋಳಕರ್, ಬಸವರಾಜ ಬೂದಿಹಾಳ, ರಮೇಶ ಪೀರೋಜಾಬಾದ, ಶಿವಕುಮಾರ ಸುಣಗಾರ, ತಮ್ಮಣ್ಣ ದಿಗ್ಗಿ, ಲಕ್ಷ್ಮೀಕಾಂತ ಕಂದಗೋಳ, ಗುಂಡು ಐನಾಪೂರ, ಶಿವಕುಮಾರ ತಳವಾರ, ಪ್ರಭು ಸಿಬಾ, ಪರಮಾನಂದ ಯಲಗೂಡಕರ್, ಕಾಶಣ್ಣ ಚನ್ನೂರ, ನಾಗರಾಜ ಯಡ್ರಾಮಿ, ಲೋಹಿತ ಮಳಖೇಡ, ಶಿವಕುಮಾರ ನಾಟೀಕಾರ, ತಿಪ್ಪಣ್ಣ ನಾಟೀಕಾರ, ವೀಣಾ ನಾರಾಯಣ, ದೇವಿಂದ್ರ ಕಾರೋಳ್ಳಿ, ಮಲ್ಲಿಕಾರ್ಜುನ ಮಾಲಗತ್ತಿ,ವಿಶ್ವರಾಜ ಫೀರೋಜಾಬಾದ, ಶರಣು ಹಲಕಟ್ಟಿ, ಶಿವು ಬುರಲಿ, ರಾಜು ಸಣ್ಣಮಾ, ಸಿದ್ದು ಮಾಲಗತ್ತಿ, ಮರಲಿಂಗ ಗಂಗಭೋ, ರವಿ ಸಣಮೋ, ನಾಗೇಂದ್ರ ನಾಟೀಕಾರ, ಬೆಳೆಪ್ಪ ಖಣದಾಳ, ಶೀವು ಮುತ್ತಗಿ, ಅಂಜನ ಕುಮಾರ, ಮಂಜು ವಾಲಿಕಾರ, ರಾಯಪ್ಪ ಹುರಮುಂಜಿ, ಶರಣಪ್ಪ ಸನಮೋ, ರಾಜು ಆಡಿನ, ಈರಣ್ಣ ಗುಡುರ, ನೂರಾರು ಕೋಲಿ ಸಮಾಜದ ಮುಖಂಡರು, ಯುವಕರು ಪಾಲ್ಗೊಂಡಿದರು.
” ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವಿಗೆ ಕಾರಣರಾದ ರಾಜಕೀಯ ಮುಖಂಡರನ್ನು ಹಾಗೂ ಕಿರುಕುಳ ನೀಡಿದ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕು. – ಶರಣಪ್ಪ ತಳವಾರ ಕಾಡಾ ಮಾಜಿ ಅಧ್ಯಕ್ಷರು.