ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ

ಶಿರಹಟ್ಟಿ,ಡಿ25: ಇತ್ತೀಚೆಗೆ ಮಾಜಿ ಸಚಿವ ಕೋಲಾರದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಅವರನ್ನು ಕೋಲಾರದಲ್ಲಿನ ಬೆಗ್ಲಿ ಹೊಸಳ್ಳಿಯ ಅವರ ಫಾರ್ಮ್ ಹೌಸ್‍ನಿಂದ ಬರುವಾಗ 8 ಜನರ ಗುಂಪೆÇಂದು ಅವರನ್ನು ಅಪಹರಣ ಮಾಡಿ ಅಜ್ಞಾತ ಸ್ಥಳದಲ್ಲಿ ಅವರನ್ನು ಕೂಡಿಹಾಕಿ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಮಾಡುವುದರೊಂದಿಗೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಜಾಡು ಹಿಡಿದು ಬಂಧಿಸಿದ ಪೆÇಲೀಸ್ ಇಲಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಬಂಧಿತ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆರ್ ವರ್ತೂರು ಪ್ರಕಾಶ ಅವರ ಅಭಿಮಾನಿ, ಗದಗ ಜಿಲ್ಲಾ ಅಹಿಂದ ಸಂಘದ ಕಾರ್ಯದರ್ಶಿ ಸಂತೋಷ ಕುರಿ ಒತ್ತಾಯಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯ ಪೆÇೀಲಿಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಿರುವುದರಿಂದಲೇ ಕರ್ನಾಟಕ ರಾಜ್ಯ ಆರೋಪ ಮುಕ್ತ ಹಾಗೂ ಭ್ರμÁ್ಟಚಾರಿಗಳಿಂದ ಮುಕ್ತವಾಗಿದೆ ಆದ್ದರಿಂದ ಪೆÇಲೀಸ್ ಅಧಿಕಾರಿಗಳಿಗೆ ನಮ್ಮ ವರ್ತೂರು ಪ್ರಕಾಶ್ ಶಿವಸೇನೆಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿವುದಲ್ಲದೇ, ಇಂಥಹ ಅಹಿತಕರ ಘಟನೆಗಳು ಸಂಭವಿಸದಂತೆ ಪ್ರತಿಕ್ಷಣವೂ ಸೇವೆ ಸಲ್ಲಿಸುತ್ತಿರುವ ಪೆÇಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಬಲವನ್ನು ನೀಡಲಿ ಎಂದು ಹಾರೈಸಿದ್ದಾರೆ.