
ಸಿಂಧನೂರ,ಮಾ.೧೬- ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರು ಇಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪೆಕ್ ಅಧ್ಯಕ್ಷರಾದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರು ಇಡುವ ವಿಚಾರವಾಗಿ ಎಲ್ಲರ ಒಮ್ಮತದ ನಿರ್ಧಾರ ಕೈಗೊಂಡು ನಂತರ ನಗರ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಹೆಸರು ಇಟ್ಟಿದ್ದಾರೆ ಇಂಥಹ ಗಲಾಟೆ ನಡೆಯುತ್ತಿರಲಿಲ್ಲ, ಆದರೆ ಶಾಸಕ ವೆಂಟರಾವ ನಾಡಗೌಡ ಈ ವಿಚಾರವನ್ನು ಜನರಲ್ಲಿ ಭಾವನಾತ್ಮಕ ತಂದು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದರು ಎಂದರು.
ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಮಾಡಲು ಹೊರಟ ಮೆರವಣಿಗೆಯಲ್ಲಿ ಗಲಾಟೆ ನಡೆದು ಪಿಎಸ್‌ಐ ಮೇಲೆ ಹಲ್ಲೆ ಮಾಡುವ ಹಂತಕ್ಕೆ ಹೋಗಿದ್ದು, ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ, ಆದರೆ ಇಲ್ಲಿ ಜಾತಿ ವಿಷಯ ಯಾಕೆ ಬಂತು ಅದನ್ನು ಯಾರು ತಂದರು ತಿಳಿಯದಾಗಿದೆ. ಇದರಲ್ಲಿ ಪಿಎಸ್‌ಐಯ ಉದ್ದಟತನ ಇರಬಹುದು ಶಾಸಕರ ಪುತ್ರ ಕಾನೂನು ಉಲ್ಲಂಘಿಸಿದ್ದಾನೆ ಎಂದರು.
ಶಾಸಕರು ತಮ್ಮ ಮಗನಿಗೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವಂತೆ ಬುದ್ದಿ ಮಾತು ಹೇಳಬಹುದಿತ್ತು. ಘಟನೆಯಲ್ಲಿ ಭಾಗಿಯಾದ ಎಲ್ಲರನ್ನು ಗುಂಡಾ ಕಾಯ್ದೆ ಪ್ರಕಾರ ಬಂಧಿಸಬೇಕು ಎಂದು ಅವರು ಪೋಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಬಿಜೆಪಿಯ ಮುಖಂಡರಾದ ನಿರುಪಾದಪ್ಪ ಜೋಳದ ರಾಶಿ, ಕೆ. ಮರಿಯಪ್ಪ, ಶಿವನಗೌಡ ಗೋರೆಬಾಳ, ದೊಡ್ಡ ಬಸವರಾಜ, ಹನಮೇಶ, ಜಡಿಯಪ್ಪ, ಶಂಭಣ್ಣ ಸೇರಿದಂತೆ ಇನ್ನಿತರರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.