
ಸಂಜೆವಾಣಿ ವಾರ್ತೆ
ಸಂಡೂರು:ಫೆ: 26; ಸಂಡೂರು ತಾಲೂಕಿನಾದ್ಯಂತ ಡಿ.ಎಂ.ಎಫ್. ಅನುದಾನ ಯಾವ ಚರಂಡಿಗೆ ಹಾದು ಹೋಗಿದೆ ಗೊತ್ತಿಲ್ಲ, ದಾಖಲಾತಿ ಇದ್ದರೆ ಮಾತ್ರ ಸಚಿವ ಆನಂದಸಿಂಗ್ ಮತಾಡಲಿ ಇಲ್ಲವಾದಲ್ಲಿ ಮಾತನಾಡುವುದು ಸರಿಯಲ್ಲ, ಸಚಿವ ಆನಂದ್ ಸಿಂಗ್ ಯಾವುದೇ ವಿಷಯದ ಬಗ್ಗೆ ದಾಖಲಾತಿ ಸಮೇತ ತೆಗೆದುಕೊಂಡು ಬಂದು ಮಾತಾಡಲಿ ನಾನು ಸಹ ಡಿ.ಎಂ.ಎಫ್. ಅನುದಾನದಡಿಯಲ್ಲಿ ಏನು ಅಭಿವರದ್ದಿ ಕಾರ್ಯಗಳು ನಡೆದಿವೆ ನಾನು ದಾಖಲೆ ಸಮೇತ ಕೊಡುತ್ತೇನೆ, ಚುನಾವಣೆಯ ಮತಬ್ಯಾಂಕಿಗಾಗಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮೊದಲು ಆನಂದ ಸಿಂಗ್ ಬಿಡಬೇಕು ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಈ.ತುಕರಾಂ ಗುಡುಗಿದರು.
ಅವರು ಸಂಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಳು ಬೆಂಚಿ ಗ್ರಾಮದಲ್ಲಿ ಮಾತನಾಡಿದರು. ನೀವು ಸಚಿವರಿದ್ದೀರಿ ಸಂಡೂರು ಕ್ಷೇತ್ರಕ್ಕೆ ಡಿ.ಎಂ.ಎಫ್. ಅನುದಾನ ಎಷ್ಟು ನೀಡಿದ್ದಿರಿ ಜನರಿಗೆ ಮಾಹಿತಿ ನೀಡಿ ಸಂವಿಧಾನ ಬದ್ಧವಾಗಿ ವಿಜಯನಗರಕ್ಕೆ 18 ರಷ್ಟು ಬಳಕೆ ಮಾಡಿಕೊಳ್ಳಬೇಕು ಅದನ್ನ ಬಿಟ್ಟು 28 ರಷ್ಟು ಬಳಕೆ ಮಾಡಿಕೊಂಡು ಸಂಡೂರು ಜನತೆಗೆ ಆನಂದ್ ಸಿಂಗ್ ರವರು ಅನ್ಯಾಯಮಾಡಿದ್ದಾರೆ, ಪ್ರವಾಸೋದ್ಯಮ ಸಚಿವರಾದ ತಾವು ಸಂಡೂರು ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಎಷ್ಟು ಅನುದಾನ ನೀಡಿದ್ದೀರಿ ಕ್ಷೇತ್ರದ ಜನರಿಗೆ ಬಹಿರಂಗ ಪಡಿಸಿ ಎಂದು ತುಕರಾಂ ಸವಾಲಾಕಿದರು. ಈಗಾಗಲೇ ಸಂತೋಷ್ ಲಾಡ್ ಅವರಿಗೂ ಮಾಹಿತಿ ಕೇಳಿದ್ದೇವೆ ಅವರು ಕೊಡಲು ಸಿದ್ದರಿದ್ದಾರೆ, ಅನಂದ್ ಸಿಂಗರವರೇ ನೀವು ಮಾಹಿತಿ ಕೊಡಿ ಎಂದು ಸವಾಲ್ ಹಾಕಿದರು.
ಅನುದಾನದ ಮೊತ್ತವನ್ನು ಶೇ: 14 ರಷ್ಟು ಹೆಚ್ಚಿಗೆ ತಎಗೆದುಕೊಂಡಿರುವ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರದ ಮೇಲೆ ಗೌರವವಿದ್ದರೆ ವಾಪಾಸ್ಸು ನೀಡಲಿ ಸಚಿವರೇ ಏನು ಅಭಿವೃದ್ಧಿಯಾಗಿಲ್ಲ ಎನ್ನುವ ನೀವು ಅ ಚಿವಾರವನ್ನು ತಿಳಿಸಿದರೆ ಅ ಅನುದಾನದಿಂದ ಅಭಿವೃದ್ದಿ ಮಾಡುತ್ತೇವೆ 6.9.2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಎಂಎಫ್ ಅನುದಾನವನ್ನು ಶೇ: 22ರಷ್ಟು ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸಭೆ ನಡೆದಿದೆ, ಈ ಸಮಾರಂಭದಲ್ಲಿ ಕಾರ್ಯದರ್ಶಿ ಗಣಿ ಇಲಾಖೆಯ ಸಚಿವರು ಸಂಬಂಧಪಟ್ಟ ಶಾಸಕರಿಲ್ಲದೆ ಬೇರೆ ಬೇರೆಯವರು ಭಾಗವಹಿಸಿ ಅತುರವಾಗಿ ಸಭೆ ನಡೆಸಿ ಸಂವಿಧಾನಕ್ಕೆ ಕಪ್ಪು ಚುಕ್ಕೆ ತರುವಂತಹ ಕೆಲಸ ಮಾಡಿದ್ದೀರಿ ಎಂದು ಅರೋಪಿಸಿದರು. ಖ.ಎಂ.ಎಫ್. ಅನುದಾನ ಸಾರ್ವಜನಿಕರದು ಸಂಡೂರು ಕ್ಷೇತ್ರದ ಜನರು ಕೇಳಲಿ ಅದನ್ನು ಬಿಟ್ಟು ರಾಜಕೀಯವಾಗಿ ಬಂದು ವೇದಿಕೆಯ ಮೇಲೆ ಆನಂದ ಸಿಂಗ್ರವರು ಜನರ ಮುಂದೆ ಸುಳ್ಳು ಹೇಳುವುದು ಸಂವಿಧಾನಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿದರು. ಮೊದಲು ಈಗಲೂ ಶ್ರೀರಾಮುಲು ಉಸ್ತುವಾರಿ ಸಚಿವರಾಗಿದ್ದಾರೆ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡಿದ ನಂತರ ಅನುದಾನ ಸದ್ಭಳಕೆಯಾಗಿಲ್ಲ ಎನ್ನುವ ಮಾತನ್ನು ಹೇಳಬೇಕು ಸುಳ್ಳು ಸಂದೇಶ ಹರಡಿಸುವುದು ಬಿಡಬೇಕು ಎಂದು ತಿಳಿಸಿದರು.
ಅಮಿತ್ ಷಾ ತಡವಾಗಿ ಬಂದ ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ ಅಲ್ಲಿನ ಜನಸಂಖ್ಯೆ ನೋಡಿ 20 ನಿಮಿಷ ಬಾರದೇ ಹೋಗಿದ್ದಾರೆ ಸಂಡೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡಿರುವುದರಿಂದ ಕಾಂಗ್ರೇಸ್ ಮೇಲೆ ಯಾವ ಪರಿಣಾಮ ಬೀರಲು ಸಾಧ್ಯವೇ ಇಲ್ಲ, ನಾನು ಪರೀಕ್ಷೆ ಬಂದಾಗ ಓದಿ ಕೊಂಡವನಲ್ಲ, ಮೊದಲೇ ಓದಿಕೊಂಡು ಪರೀಕ್ಷೆ ಬರೆದಿದ್ದೇನೆ, ಓದಿಕೊಳ್ಳದೇ ಪರೀಕ್ಷೆ ಬರೆದವರು ಹೇಗೆ ಪಾಸ್ ಅಗಬೇಕು ಅಂತಹ ಭಯ ಪಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.